ಬಿಸಿಯೂಟ ಮಾತೆಯರ ವೇತನ ಹೆಚ್ಚಳಕ್ಕಾಗಿ ಐತಿಹಾಸಿಕ ಜಿಲ್ಲಾ ಪಂಚಾಯತಿ ಚಲೋ ಹೋರಾಟ – ಕಲ್ವಮಂಜಲಿ ರಾಮು ಶಿವಣ್ಣ

ಕೋಲಾರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ನಲ್ಲಿ ಬಿಸಿಯೂಟ ನೌಕರರ ಕನಿಷ್ಠ ವೇತನವನ್ನು 10500 ರೂಗಳಿಗೆ ಹೆಚ್ಚಳ ಮಾಡುವಂತೆ ಹಾಗೂ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಕೋಲಾರ ನಗರದ ನಚಿಕೇತನ ನಿಲಯದಿಂದ ಜಿಲ್ಲಾ ಪಂಚಾಯತಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮುತ್ತಿಗೆ ಹಾಕಿ ಮುಖ್ಯ ಮಂತ್ರಿಗಳಿಗೆ, ಉಪ ಮುಖ್ಯ ಮಂತ್ರಿಗಳಿಗೆ, ಸಚಿವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಜಾಸೇವಾ ಸಮಿತಿ ಸಂಯೋಜಿತ ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ, ಕಳೆದ 23 ವರ್ಷಗಳಿಂದ ಬಿಸಿಯೂಟ ತಯಾರಿಕೆಯಲ್ಲಿ ದುಡಿಯುತ್ತಿರುವ ನೌಕರರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು,ಪ್ರಸ್ತುತ ಕೇವಲ 3600 ರಿಂದ 3700 ರೂ ಸಂಬಳಕ್ಕೆ ದುಡಿಯುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.

ಆದ್ದರಿಂದ ರಾಜ್ಯದ ಎಲ್ಲಾ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ 10500 ರೂಗಳನ್ನು ಮುಂಬರುವ ಬಜೆಟ್ ನಲ್ಲಿ ಹೆಚ್ಚಳ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಬೇಕು, ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಆದೇಶ ಹೊರಡಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಪ್ರತಿ ತಿಂಗಳು 5ನೇ ತಾರೀಖು ಬ್ಯಾಂಕ್ ಮೂಲಕ ವೇತನ ನೀಡಬೇಕು ಹಾಗೂ ಬೇಸಿಗೆ ರಜಾದಿನಗಳ ವೇತನ ನೀಡಬೇಕು, ಎಸ್.ಡಿ.ಎಂ.ಸಿ ಹಾಗೂ ಶಾಲ ಶಿಕ್ಷಕರಿಂದ ಬಿಸಿಯೂಟ ನೌಕರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಕಿರುಕುಳ ನೀಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಮವಸ್ತ್ರ ನೀಡಬೇಕು, ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು. ವಿಮಾ ಪಾಲಿಸಿ ನೀಡಬೇಕು ಹಾಗೂ 2 ಲಕ್ಷ ಇಡಿಗಂಟು ನೀಡಬೇಕು,ಅವಘಡಗಳಾದಾಗ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಬೇಕು, ನೌಕರರ ಮಕ್ಕಳಿಗೆ ಸರ್ಕಾರಿ ಹುದ್ದೆಗಳಲ್ಲಿ ಆದ್ಯತೆ ನೀಡಬೇಕು, ಬಿಸಿಯೂಟ ನೌಕರರ ರಕ್ಷಣೆಗೆ ಜಿಲ್ಲಾ ಮಟ್ಟದ ರಕ್ಷಣಾ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು.

ಸಮಿತಿಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ ಮಾತನಾಡಿ, ಬಿಸಿಯೂಟ ನೌಕರರ ಬೇಡಿಕೆಗಳು ಈಡೇರಿಸುವಂತೆ ಸಾಂಕೇತಿಕವಾಗಿ, ಶಾಂತಿಯುತ ಹೋರಾಟ ನಡೆಸಲಾಗಿದ್ದು, ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿರಂತರವಾಗಿ ನಡೆಸಲಾಗುವುದು. ಬೇಡಿಕೆಗಳನ್ನು ಸರ್ಕಾರ ಮುಂದಿನ ಬಜೆಟ್ ನಲ್ಲಿ ಈಡೇರಿಸದಿದ್ದರೆ ರಾಜ್ಯದ ಎಲ್ಲಾ ಬಿಸಿಯೂಟ ನೌಕರರು ಕೆಲಸ ಸ್ಥಗಿತಗೊಳಿಸಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ಬಿಸಿಯೂಟ ನೌಕರರಿಗೆ ಸುರಕ್ಷಿತೆ ಇಲ್ಲವಾಗಿದ್ದು, ಹಳೆಯ ಪಾತ್ರೆ, ಸ್ಟವ್, ಅವಧಿ ಮುಗಿದಿರುವ ಗ್ಯಾಸ್ ಸಿಲಿಂಡರ್ ಪೈಪ್‌ಗಳಿಂದ ಪ್ರಾಣ ಭಯದಲ್ಲೇ ಅಡುಗೆ ಮಾಡುವ ಪರಿಸ್ಥಿತಿ ಏರ್ಪಟ್ಟಿದೆ, ಸರ್ಕಾರ ಹೊಸ ಸಲಕರಣೆಗಳನ್ನು ಒದಗಿಸುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಡಿ.ಎಸ್ ಶಿವಕುಮಾರ್, ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಿಸಿಯೂಟ ಮಾತೆಯರಾದ ಕೋಡಹಳ್ಳಿ ಜ್ಯೋತಿ, ಕೋಲಾರ ಮಮತ, ವಕ್ಕಲೇರಿ ನಾಗವೇಣಮ್ಮ, ಸುಗಟೂರು ಶೋಭಾ, ಮುಳಬಾಗಿಲು ಲಕ್ಷ್ಮೀ, ಎಮ್ಮೆನ್ನತ್ತ ಶೋಭಾ, ಪ್ರಮೀಳಮ್ಮ, ಅಮ್ಮಯ್ಯಮ್ಮ, ರತ್ನಮ್ಮ, ಲಕ್ಷ್ಮೀ, ರಾಧಮ್ಮ, ಮಂಜುಳ, ವನಿತಾ, ಅಮರಾವತಿ, ಶೋಭಾ, ಸರಸ್ಪತಮ್ಮ, ರಾಮ ಲಕ್ಷ್ಮಮ್ಮ, ಕಲ್ವಮಂಜಲಿ ಮೀನಾಕ್ಷಮ್ಮ, ಪಾರ್ವತಮ್ಮ, ಕಲಾವತಿ, ಚಂದ್ರಮ್ಮ, ಚೈತ್ರ, ಮುನಿರತ್ನ, ದುರ್ಗಮ್ಮ, ಆರತಿ, ಸುಮ, ವೀಣಾ, ಶಿಲ್ಪ, ಜಯಂತಿ, ಸೇರಿದಂತೆ ನಾಗಮಣಿ, ಮುನಿರಾಜಮ್ಮ, ವಿಜಯಮ್ಮ, ವೆಂಕಟ ಲಕ್ಷ್ಮಮ್ಮ, ಸರೋಜಮ್ಮ, ಅನಸೂಯಮ್ಮ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಾವಿರಕ್ಕೂ ಹೆಚ್ಚು ಬಿಸಿಯೂಟ ನೌಕರರ ಭಾಗವಹಿಸಿದ್ದು, ಪ್ರತಿಭಟನೆಯ ನೇತೃತ್ವವನ್ನು ತೇರಹಳ್ಳಿ ಚಂದ್ರಪ್ಪ ,ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿಯ ಮುಖಂಡರುಗಳು ವಹಿಸಿದ್ದರು.

Leave a Reply

Your email address will not be published. Required fields are marked *