
‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಮಾತಿದೆ. ಶಿಕ್ಷಣ ಎನ್ನುವುದು ಹೆಣ್ಣಿಗೆ ಕೇವಲ ಅಕ್ಷರ ಕಲಿಸುವುದಿಲ್ಲ. ಬದಲಾಗಿ ಹಿಂದಿನ ಕಾಲದಿಂದ ಹೆಣ್ಣನ್ನು ಆವರಿಸಿದ ಅಜ್ಞಾನದ ಕತ್ತಲೆಯನ್ನು ತೋಡೆದು ಹಾಕುವ ಸಾಧನ. ಅದು ಹೆಣ್ಣಿಗೆ ಧೈರ್ಯವನ್ನು ನೀಡುತ್ತದೆ
ನಿತ್ಸ ಸಮಾಜದಲ್ಲಿ ಇರುವ ಎಲ್ಲಾ ತಡೆಗೋಡೆಗಳನ್ನು ಎದುರಿಸಿ ನಿಲ್ಲುವ ಶಕ್ತಿ ಅದುವೇ ಶಿಕ್ಷಣ! ಶಿಕ್ಷಣ ಜ್ಞಾನ ದೈರ್ಯ ಸಮಾಜದಲ್ಲಿ ತಲೆ ನಿಲ್ಲುವಂತೆ ಮಾಡುತ್ತದೆ . ತಾನೂ ಹೆಣ್ಣಾದರೂ ಯಾರಿಗೂ ಕಮ್ಮಿ ಇಲ್ಲ ಎನ್ನುವ ಆತ್ಮವಿಶ್ವಾಸದಿಂದ ಜೀವಿಸುವಂತೆ ಮಾಡುತ್ತದೆ. ಅಲ್ಲದೆ ಎಲ್ಲಾ ಕ್ಷೇತ್ರದಲ್ಲ ಹೆಣ್ಣು ಸಾಧನೆ ಅಪಾರ.
ಇಂದು ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬಲ್ಲಳು , ಸೈನಿಕಳಾಗಿ ದೇಶವನ್ನು ಕಾಯಬಲ್ಲಳು , ಗಗನಕ್ಕೆ ಹಾರಿ ಇತಿಹಾಸ ರಚಿಸಬಲ್ಲಳು. ಆಧುನಿಕ ಕಾಲದಲ್ಲಿ ಹೆಣ್ಣು ಮಕ್ಕಳು ಬಾರಿ ಅಡುಗೆ ಕೆಲಸಕ್ಕೆ ಸೀಮಿತವಾಗದೆ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಶಿಕ್ಷಣ ಪಡೆದ ಪ್ರತಿ ಹೆಣ್ಣು ಮಕ್ಕಳು ಹಣಕಾಸೀನ ವಿಷಯದಲ್ಲಿ ಸ್ವಾತಂತ್ರ್ಯವಾಗುತ್ತಾರೆ. ಇಂದು ಮಹಿಳೆಯರು ಮನೆಯ ಕೆಲಸಗಳನ್ನು ನಿಭಾಯಿಸುವುದರ ಜೊತೆ ಜೊತೆಗೆ ಜೀವನ ಸುಗಮಗೊಳಿಸಲು ಮನೆಯ ಹೊರಗೂ ದುಡಿಯುತ್ತಿದ್ದಾರೆ. ಶಿಕ್ಷಣವು ಹೆಣ್ಣು ಮಕ್ಕಳಿಗೆ ಕನಸಿನ ರೆಕ್ಕೆ ಬಿಚ್ಚಿ ಹಾರಲು ಕಲಿಸುತ್ತದೆ ಹಾಗೂ ಜೀವನದಲ್ಲಿ ಕಂಡ ಕನಸ್ಸನ್ನೆಲ್ಲ ಸ್ವಂತ ಕಾಲ ಮೇಲೆ ತಾನು ನಿಂತು ಸಾಧಿಸುವಂತೆ ಪ್ರೇರೇಪಿಸುತ್ತದೆ. ಸಮಾಜದಲ್ಲಿರುವ ತನ್ನ ಸ್ಥಾನವನ್ನು ಅರಿತು ತಾನು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಲ್ಲ. ಅದನ್ನು ಬಿಟ್ಟು ಬೇರೆ ಪ್ರಪಂಚವಿದೆ ಎನ್ನುವುದನ್ನು ಮನದಟ್ಟು ಮಾಡುತ್ತದೆ.
ತಾಯಿಯಾಗಿ, ಹೆಂಡತಿಯಾಗಿ, ಕುಟುಂಬದ ಒಳಿತಿಗಾಗಿ ಶ್ರಮಿಸುವವಳು ಹೆಣ್ಣು. ಕೆಲವೊಮ್ಮೆ ಗಂಡಿನ ಸ್ಥಾನದಲ್ಲಿ ನಿಂತು ಕುಟುಂಬ ನಡೆಸುವ ಮಹಿಳೆಯರು ಕೂಡ ದಿಟ್ಟತನದಿಂದ ಬದುಕುತ್ತಿದ್ದಾರೆ. ಶಿಕ್ಷಣದ ಕ್ಷೇತ್ರದಲೂ ಹೆಣ್ಣು ಮಕ್ಕಳು ಒಂದು ಕೈ ಮೇಲೆಯೇ ಇದ್ದಾರೆ. ಶಿಕ್ಷಣ ಎನ್ನುವುದು ಯಾರೊಬ್ಬ ವ್ಯಕ್ತಿಯಿಂದಲೂ ಕಸಿದುಕೊಳ್ಳಲಾಗದ ಆಸ್ತಿ. ಅಂತಹ ಆಸ್ತಿ ಒಬ್ಬ ಮಹಿಳೆಯ ಬಳಿ ಇದ್ದರೆ ಆಕೆ ಸಮಾಜದಲ್ಲಿ ಯಾರ ಮುಂದೆಯೂ ಯಾವ ಸಂದರ್ಭದಲ್ಲೂ ತಲೆತಗ್ಗಿಸುವ ಸಂದರ್ಭ ಬರದೆ ದಿಟ್ಟತನದಿಂದ ಬದುಕಬಲ್ಲಳು. ಶಿಕ್ಷಣ ಎನ್ನುವುದು ಹೆಣ್ಣಿಗೆ ರಕ್ಷಾ ಕವಚ ಇದ್ದಂತೆ.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ದೃಢಸಂಕಲ್ಪ ನಮ್ಮದಾಗಿರಬೇಕು. ಕನಸುಗಳನ್ನೆಲ್ಲ ನನಸಾಗಿಸುವ ಹಾದಿಯಲ್ಲಿ ನಡೆದು ರೆಕ್ಕೆ ಬಿಚ್ಚಿ ಹಾರುವಂತಾಗಬೇಕು. ಶಿಕ್ಷಣ ಎನ್ನುವುದು ಕೇವಲ ಅಕ್ಷರಕ್ಕಷ್ಟೇ ಸೀಮಿತವಲ್ಲ, ಸಮಾಜದಲ್ಲಿ ಪ್ರತಿ ಹೆಣ್ಣು ಮಗುವನ್ನು ಆತ್ಮವಿಶ್ವಾಸದಿಂದ ತಲೆಎತ್ತಿ ನಿಲ್ಲುವಂತೆ ಮಾಡುತ್ತದೆ. ಸಹನೆ, ಪ್ರೀತಿ ಮತ್ತು ಧೈರ್ಯದ ಸಂಕೇತವಾಗಿರುವ ಪ್ರತಿ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
ಪ್ರತಿ ಗಂಡಸ್ಸಿನ ಯಶಸ್ಸಿಗೆ ಹೆಣ್ಣೇ ಕಾರಣವೆಂಬುದು ಹಲವಾರು ಬಾರಿ ಹಲವರ ಜೀವನದಲ್ಲಿ ಇಂದು ನಾವೆಲ್ಲಾ ಕಂಡಿದ್ದೇವೇ ಹೆಣ್ಣನ್ನು ಗೌರವದಿಂದ ಕಾಣುವ ದೇಶ ನಮ್ಮ ಭಾರತ ದೇಶ ಅದರೂ ಕೆಲವು ಬಾರಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ ಇದಕ್ಕೆ ಕಾರಣ ಇರಬಹುದು. ಎಷ್ಟೆ ಬಲವಾದ ಕಾನೂನು ಇದ್ದರೂ ಕೆಲವರು ಹೆಣ್ಣನ್ನು ಕಾಣುವ ಕಣ್ಣು ಸರಿಯಿಲ್ಲದಿದ್ದರೆ ಅದಕ್ಕೆ ಕಾನೂನಿನ ತಪ್ಪಲ್ಲ ನೋಡುವವರ ಕಣ್ಣು ಹಾಗೂ ನೋಟದಲ್ಲಿರುತ್ತೆ.
ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ಪ್ರಮುಖ ಜಾಗತಿಕ ದಿನವಾಗಿದೆ ಇದು ಪ್ರಪಂಚದಾದ್ಯಂತ ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರೂ ತಪ್ಪಾಗಲಾರದು ಅಲ್ಲದೆ ಹೆಣ್ಣಿನ ಮಹತ್ವ ಇತರರಿಗೆ ತಿಳಿಸುವ ಅಥವ ಅರ್ಥ ಮಾಡಿಸುವ ಹಾಗು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಗುರುತಿಸುವ ದಿನ ಎಂದರು ತಪ್ಪಾಗೋದಿಲ್ಲ.
ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ,
ಪ್ರಮುಖವಾಗಿ ಮಹಿಳಾ ದಿನಾಚಾರಣೆಯ ದಿನದಂದು ವಿಶೇಷವಾಗಿ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವುದು, ಲಿಂಗ ಅಸಮಾನತೆಯ ಬಗ್ಗೆ ಧ್ವನಿ ಎತ್ತುವುದು ಮತ್ತು ಮಹಿಳೆಯರ ಹಕ್ಕುಗಳನ್ನು ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಶಾಲೆಗಳು, ಕಚೇರಿಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳು, ಚರ್ಚಾಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸುವುದು ವಿಶೇಷವಾಗಿದೆ.
