ಕೋಲಾರ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ನಡೆಯಲಿರುವ 7 ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಗರದ ಕೋಟೆಯ ವಾಲ್ಮೀಕಿ ಭವನದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಮುಂದಿನ ವರ್ಷ ಫೆಬ್ರುವರಿ ತಿಂಗಳಿನ 8 ಮತ್ತು 9 ರಂದು ವಾಲ್ಮೀಕಿ ಗುರುಪೀಠದಲ್ಲಿ ಜಾತ್ರೆ ಮಹೋತ್ಸವ ನಡೆಯಲಿದ್ದು ಜಿಲ್ಲೆಯಾದ್ಯಂತ ಸಮುದಾಯದವರು ಪಕ್ಷ, ಜಾತಿ ಭೇದ ಮರೆತು ಎಲ್ಲರೂ ಭಾಗವಹಿಸಬೇಕು ಇದಕ್ಕೆ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿಯು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಎಂ ಬಾಲಗೋವಿಂದ್, ಹಾಗೂ ಬೈರಂಡಹಳ್ಳಿ ನಾಗೇಶ್ ಅವರನ್ನು ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು
ಸಭೆಯಲ್ಲಿ ನಗರಸಭೆ ಸದಸ್ಯ ಎನ್.ಅಂಬರೀಷ್, ಮುಖಂಡರಾದ ಮಾಲೂರು ಎನ್ ವೆಂಕಟರಾಮ್ , ಕುಡುವನಹಳ್ಳಿ ಆನಂದ್, ನರೇಶ್, ನರಸಿಂಹಪ್ಪ, ಅಶ್ವಥ್, ಕೆ.ಆನಂದ್ ಕುಮಾರ್, ಕಲ್ವಮಂಜಲಿ ರವಿ, ಕಲ್ಲಂಡೂರು ನಾರಾಯಣಸ್ವಾಮಿ, ಬೆಳ್ಳೂರು ತಿರುಮಲೇಶ್, ದಿಂಬ ಚಾಮನಹಳ್ಳಿ ರಾಮಪ್ಪ, ಶಂಕರಪ್ಪ, ಮೇಡಹಾಳ ಮಂಜುನಾಥ್, ನಿವೃತ್ತಿ ಶಿಕ್ಷಕ ನರಸಿಂಹಯ್ಯ, ಐತಾರಸಹಳ್ಳಿ ಶ್ರೀನಿವಾಸ್, ಕೋಟೆ ಮಂಜುಳ ಶ್ರೀನಿವಾಸ್, ಮಧು, ಮುಂತಾದವರು ಇದ್ದರು.