ಜನ ಮನ ಗೆದ್ದ “ದ ರೂಲರ್ಸ್” ಕನ್ನಡ ಸಿನಿಮಾ 

ಕೋಲಾರ: ನಗರದ ಭವಾನಿ ಚಿತ್ರ ಮಂದಿರದಲ್ಲಿ “ದ ರೂಲರ್ಸ್” ಕನ್ನಡ ಚಲನ ಚಿತ್ರ ಶುಕ್ರವಾರ ಬಿಡುಗಡೆ ಆಗಿದ್ದು, ಸಿನಿಮಾದ ಮೊದಲ ಶೋ ಚಿತ್ರಮಂದಿರ ಹೌಸ್ ಫುಲ್ ಆಗುವ ಮೂಲಕ ಯಶಸ್ಸು ಕಂಡಿದೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಸಂದೇಶ್ ಚಿತ್ರ ಪ್ರದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ “ದ ರೂಲರ್ಸ್” ಚಲನಚಿತ್ರ ಬಿಡುಗಡೆ ಆಗಿರುವ ಎಲ್ಲಾ ಚಿತ್ರ ಮಂದಿರಗಳಲ್ಲಿ ಮೊದಲ ಪ್ರದರ್ಶನ ಬಹುತೇಕ ಹೌಸ್ ಫುಲ್ ಆಗಿರುವ ಬಗ್ಗೆ ತಿಳಿದು ಬಂದಿದೆ. ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿ ಆಶೀರ್ವಾದ ಮಾಡಿದ್ದಾರೆಂದು ತಿಳಿಸಿದರು.

ಉತ್ತಮ ಕಥೆಯೊಂದಿಗೆ ಕೋಲಾರ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ನಿರ್ಮಾಣ ಮಾಡಿದ್ದು, ಪ್ರತಿಯೊಂದು ಕುಟುಂಬ ನೋಡಬೇಕಾದ ಚಿತ್ರವಾಗಿದೆ. ಅದರಲ್ಲೂ ಪ್ರತಿ ಯುವತಿ, ಮಹಿಳೆ ನೋಡಲೇಬೇಕಾದ ಚಿತ್ರವಾಗಿದೆ. ಉತ್ತಮ ಸಂದೇಶದೊಂದಿಗೆ ಸಂವಿಧಾನ ನೀಡಿರುವ ಹಕ್ಕುಗಳ ಪ್ರತಿಪಾದನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೋಲಾರ ಜಿಲ್ಲೆಯ ಜನತೆ ಚಿತ್ರವನ್ನು ನೋಡುವ ಮೂಲಕ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.

“ದ ರೂಲರ್ಸ್” ಚಲನಚಿತ್ರ ನೋಡಲು ಆಗಮಿಸಿದ್ದ ಸಮಾಜ ಸೇವಕ ಎ.ಶ್ರೀನಿವಾಸ್ ಮಾತನಾಡಿ, ಚಿತ್ರದ ಬಗ್ಗೆ ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, “ದ ರೂಲರ್ಸ್” ಚಲನಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ ಇದ್ದು, ರಾಜ್ಯದ ಜನತೆ
“ದ ರೂಲರ್ಸ್” ಸಿನಿಮಾವನ್ನು ವೀಕ್ಷಿಸುವ ಮೂಲಕ ಸಂದೇಶ್ ರವರ ಪ್ರಯತ್ನಕ್ಕೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.

ಭವಾನಿ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ ದ ರೂಲರ್ಸ್ ಚಿತ್ರದಲ್ಲಿ ಅಭಿನಯಿಸಿರುವ ನಾಯಕ ನಟಿಯೊಂದಿಗೆ ಅನೇಕ ಸಹ ನಟರು, ನಟಿಯರು ಜನತೆಯೊಂದಿಗೆ ಚಿತ್ರ ವೀಕ್ಷಿಸಿ ಖುಷಿ ಪಟ್ಟರು.

Leave a Reply

Your email address will not be published. Required fields are marked *