ಸೀತಿಯಲ್ಲಿ ನಾಳೆ ಶ್ರೀನಿವಾಸ ಕಲ್ಯಾಣೋತ್ಸವ – ಸೀತಿಹೊಸೂರು ಮುರಳಿಗೌಡ 

ಕೋಲಾರ: ಮುರಳಿಗೌಡ ಅಭಿಮಾನಿಗಳ ಬಳಗ, ಎಂಜಿ ಯುವ ಬ್ರಿಗೇಡ್, ಡಿಕೆ ರವಿ ಅಭಿಮಾನಿಗಳ ಬಳಗ ಮತ್ತು ಶ್ರೀವಾರಿ ಫೌಂಡೇಷನ್ ತಂಡದಿಂದ ಸೀತಿಯಲ್ಲಿ ನ.16ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಸಲಾಗುತ್ತಿದ್ದು 5 ಸಾವಿರ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜಸೇವಕ ಸೀತಿಹೊಸೂರು ಮುರಳಿಗೌಡ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀವಾರಿ ಫೌಂಡೇಷನ್ ಮುಖಂಡ ವೆಂಕಟೇಶಮೂರ್ತಿ ಅವರ ಸಮ್ಮುಖದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪಕ್ಷಾತೀತವಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಲಾಗುತ್ತಿದ್ದು ಶನಿವಾರ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಜರುಗಲಿದೆ ಎಂದರು. ತಿರುಪತಿಯ ಉತ್ಸವಮೂರ್ತಿಯನ್ನು ಟಿಟಿಡಿಯ 25 ಪುರೋಹಿತರು ತರಲಿದ್ದು ಅವರೆಲ್ಲರನ್ನೂ ಸೀತಿ ಗ್ರಾಮದ ಹೊರವಲಯದಲ್ಲಿ ಧಾರ್ಮಿಕ ಕೈಂಕರ್ಯಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುವುದು.

ಕಲ್ಯಾಣೋತ್ಸವದಲ್ಲಿ ಭಾಗವಹಿಸುವ ಸುಮಂಗಲಿಯರಿಗೆ ಬಾಗಿನ ಸಿಗಲಿದ್ದು 5 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಆಯೋಜಕರಾದ ಅಮ್ಮನಲ್ಲೂರು ಎಂ.ಅಮರೇಶ್ ಮತ್ತು ಚಿಕ್ಕೊಂಡಹಳ್ಳಿ ಸಿಕೆ ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *