ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಭೀಮ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅವರು ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಮುಂಬರುವ ಸಿನಿಮಾದ ಫಸ್ಟ್ ಲುಕ್ ಕೂಡಾ ದುನಿಯಾ ವಿಜಯ್ ರಿವೀಲ್ ಮಾಡಿದ್ದಾರೆ.
ಸಲಗ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದ ದುನಿಯಾ ವಿಜಯ್ ಅವರು ಭೀಮ ಸಿನಿಮಾ ಮಾಡಿ ಗೆದ್ದಿದ್ದಾರೆ. ಎಲ್ಲೆಡೆ ಭೀಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಈ ನಡುವೆ ದುನಿಯಾ ವಿಜಯ್ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಅದಕ್ಕೆ ವಿಕೆ 30 ಎಂದು ಹೆಸರಿಟ್ಟು ಪೋಸ್ಟರ್ ಅನಾವರಣ ಕೂಡಾ ಮಾಡಿದ್ದಾರೆ. ಹೊಸ ಪೋಸ್ಟರ್ ನಲ್ಲಿ ಖಡಕ್ ಫಾರೆಸ್ಟ್ ಆಫೀಸರ್ ಲುಕ್ ನಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದು, ವಿಜಯ್ ಹೆಗಲ ಮೇಲೆ ಉಡ ಇರುವುದರಿಂದ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಇನ್ನು ಈ ಹಿಂದೆ ಭೀಮ ಸಿನಿಮಾದಲ್ಲಿ ಡ್ರಗ್ಸ್ ಸಂಬಂಧಿಸಿದ ವಿಚಾರಗಳು ಇತ್ತು. ಈಗ ಮುಂಬರುವ ದುನಿಯಾ ವಿಜಯ್ ಅವರ ಸಿನಿಮಾದಲ್ಲಿ ಯಾವ ಯಾವ ವಿಷಯಗಳು ಇರಲಿವೆ? ಸಿನಿಮಾದಲ್ಲಿ ಯಾರು ಯಾರು ಇರಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ಈ ಸಿನಿಮಾದಲ್ಲಿ ಡಿಫರೆಂಟ್ ರೂಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ನೋಡಿದರೆ ಇದು ಕಾಡಿನಲ್ಲಿ ನಡೆಯುವ ಕಥೆ ಎಂದೇ ತಿಳಿಯಲಾಗಿದೆ. ಆದರೆ ಅದಕ್ಕೂ ಮೀರಿದ ಕಥೆಯನ್ನು ಸಿನಿಮಾದಲ್ಲಿ ನಿರೀಕ್ಷಿಸಬಹುದಾಗಿದೆ. ಇನ್ನು ದುನಿಯಾ ವಿಜಯ್ ಅವರ ಹೊಸ ಸಿನಿಮಾವು ಸಲಗ, ಭೀಮ ಸಿನಿಮಾಗಿಂತಲೂ ವಿಭಿನ್ನವಾಗಿ ಈ ಚಿತ್ರ ಮೂಡಿಬರಲಿದೆ ಎಂದಿದ್ದಾರೆ. ಆದ್ರೆ ಸದ್ಯಕ್ಕೆ ಕಥೆಯ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.
ದುನಿಯಾ ವಿಜಯ್ ಅವರ ಹೊಸ ಸಿನಿಮಾವನ್ನು ವೆಟ್ರಿವೇಲ್ (ತಂಬಿ) ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸಲಗ, ಭೀಮ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಇದೀಗ ದುನಿಯಾ ವಿಜಯ್ ಅವರ VK 30 ಹೊಸ ಸಿನಿಮಾವನ್ನು ವೆಟ್ರಿವೇಲ್ ಅವರು ಆ್ಯಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.