ಕೋಲಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಬದಲಾವಣೆಗೆ ಪ್ರಶ್ನೆ ಎಲ್ಲಿಂದ ಬರುತ್ತೇ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಅವರು ಇವರು ಹೇಳುವ ಮಾತುಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಸರಕಾರದ ಮಟ್ಟದಲ್ಲಿ ಏನಾದರೂ ಚರ್ಚೆ ಮಾಡಿದ್ದರಾ ಇಲ್ಲವೇ ಇಲ್ಲ. ವಿರೋಧ ಪಕ್ಷಗಳ ಊಹಾಪೋಹಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು
ಕೊಡುವುದಾದ್ರೆ ಕೋಲಾರಕ್ಕೆ ಸಿಎಂ ಸ್ಥಾನ ಕೊಡಲಿ:
ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಆಸೆ ಪಟ್ಟಿದ್ದಾರೆ ಎಂಬುದಕ್ಕೆ ಉತ್ತರಿಸಿ ಮುಂದಕ್ಕೆ ಏನಾದರೂ ಸಿಗಬಹುದು ಅಂತ ಕೆಲವರು ಈಗಿನಿಂದಲೂ ಕಲ್ಲು ಹಾಕಲು ಹೊರಟಿರಬಹುದು. ಆಸೆಗಾಗಿ ಮಾತಾಡಿದ್ದಾರೆ ಹಾಗೇನಾದರೂ ಇದ್ದಲ್ಲಿ ನನ್ನನ್ನು ಯಾರಾದರೂ ಕೇಳತ್ತಾ ಇದ್ದರೂ ನಮಗೂ ಬೆಂಬಲ ಕೊಡಿ ಅಂತ ಇದುವರೆಗೂ ಅಂತಹ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಉತ್ತರ ಕರ್ನಾಟಕಕ್ಕೆ ಬೆಳಗಾವಿ ಭಾಗಕ್ಕೆ ಕೇಳತ್ತಾರೆ. ಆದರೆ ಕೋಲಾರಕ್ಕೂ ಕೊಡಲಿ ಬಿಡಿ ಬೆಂಗಳೂರಿಗೆ ಹತ್ತಿರವಾಗುತ್ತದೆ. ಮೊದಲ ಸಿಎಂ ಕೋಲಾರದಿಂದ ಆಗಿರೋದು ಕೇಳೋದು ತಪ್ಪಿಲ್ಲ. ಕೋಲಾರ ಅಭಿವೃದ್ಧಿಗೆ ಮಂತ್ರಯಾಗಲಿ ಶಾಸಕರಾಗಲಿ ಮಾಡೇ ಮಾಡತ್ತೇವೆ. ಜನ ಮಾತಾಡಲಿಕ್ಕೆ ಉತ್ತರ ಕೊಡಲ್ಲ ಮುಂದೆ ಎರಡು ತಿಂಗಳಲ್ಲಿ ನೀವೇ ಹೇಳತ್ತೀರ ಅಭಿವೃದ್ಧಿ ವಿಚಾರವನ್ನು ಎಂದು ಉತ್ತರಿಸಿದರು.
ಇದನ್ನೂ ಓದಿ: ಶಿವಲಿಂಗದ ಮೇಲೆ ಕಾಲಿಟ್ಟು ಪಾದಪೂಜೆ – ಸ್ವಾಮೀಜಿ ಸ್ಪಷ್ಟನೆ
ಸಿಎಂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ:
ಮುಡಾ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷವೇ ತನಿಖೆಗೆ ಒತ್ತಾಯಿಸಿದೆ. ಮೊದಲು ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಯಲಿ ಅಂತ ಆದರೆ ಯಾರೋ ಒಬ್ಬ ವ್ಯಕ್ತಿ ಅರ್ಜಿ ಕೊಟ್ಟ ಮಾತ್ರಕ್ಕೆ ರಾಜ್ಯಪಾಲರು ನೋಟೀಸ್ ನೀಡಿದ್ದಾರೆ ಅಷ್ಟೇ ಅದಕ್ಕೆ ಎಲ್ಲಾ ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಪಕ್ಷದಲ್ಲಿ ಇದರ ಬಗ್ಗೆ ತೀರ್ಮಾನ ಇಲ್ಲ ಅಂತಹ ಸಂದರ್ಭ ಬಂದರೆ ಯಾರಿಗೆ ಕೊಡಬೇಕು ಅಂತ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು ನಾನು ಅಂತೂ ಆಕಾಂಕ್ಷಿಯಲ್ಲ ಎಂದರು.
2027ಕ್ಕೆ ಎತ್ತಿನಹೊಳೆ ನೀರು ಬರುತ್ತದೆ:
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ 2027ಕ್ಕೆ ಎತ್ತಿನ ಹೊಳೆ ಯೋಜನೆಯಿಂದ ನೀರು ಬರಲಿದೆ. ಈಗಾಗಲೇ ಯೋಜನೆಯ ಪ್ರಾರಂಭವಾಗಿ ನೀರು ಹರಿಸಲಾಗುತ್ತಾ ಇದ್ದು ನಮಗೆ 24 ಟಿಎಂಸಿ ನೀರು ಬರಲಿದೆ ಅದರಲ್ಲಿ 9 ಟಿಎಂಸಿ ನೀರು ಕೆರೆಗಳಿಗೆ ತುಂಬಿಸಲಾಗುತ್ತದೆ ಅಲ್ಲಿ ತನಕ ಬೇಸರ ಇದ್ದೇ ಇರುತ್ತದೆ ಅರಣ್ಯ ಇಲಾಖೆಯು ಪರಿಸರ ನಾಶದ ಬಗ್ಗೆ ದೂರಗಳು ಇವೆ ಇದಕ್ಕೆ ಸಿಎಂ ನೇತೃತ್ವದಲ್ಲಿ ಸಭೆ ಮಾಡಲಾಗಿದೆ ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದರು.