
ಕೋಲಾರ: ಭಾರತೀಯರ ಸೇವಾ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಜೀವ ತುಂಬಿಸಲು ಸಂಘಟನೆ ಪದಾಧಿಕಾರಿಗಳ ಪುನರ್ ರಚನೆ ರಚಿಸಲು ತೀರ್ಮಾನಿಸಲಾಯಿತು ಎಂದು ಸಮಿತಿಯ ರಾಜ್ಯಾಧ್ಯಕ್ಷ ವಿ.ಅಮರ್ ತಿಳಿಸಿದರು.
ನಗರದ ನಚಿಕೇತನ ನಿಲಯದಲ್ಲಿ ಶನಿವಾರ ನಡೆದ ಸರ್ವ ಸದಸ್ಯರ ಪುನರಾಯ್ಕೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ನಡೆಸುವ ಜನಸೇವಾ ಕಾರ್ಯಗಳ ಮುನ್ನೋಟ, ಸಂಘಟನೆ ಹಾಗೂ ಚಟುವಟಿಕೆಗಳ ವಿಚಾರವನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಯಿತು ಎಂದು ವಿವರಿಸಿದರು.
ಭಾರತೀಯರ ಸೇವಾ ಸಮಿತಿಯಿಂದ 5ವರ್ಷಗಳ ಹಿಂದೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಾಲುಮರದ ತಿಮ್ಮಕ್ಕ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಗಣ್ಯರೊಂದಿಗೆ ದೊಡ್ಡದಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೆಲವು ಕಾರಣಾಂತರ ಸಂಘಟನೆಯ ಚಟುವಟಿಕೆಯು ಹಿನ್ನಡೆ ಪಡೆದಿತ್ತು. ಆದರೆ, ಮತ್ತೆ ಪುಟಿದ್ದೇಳುವ ರೀತಿ ಸಂಘಟನೆ ಮಾಡುತ್ತೇನೆ ಎಂದರು.
ಹಂತ ಹಂತವಾಗಿ ಜಿಲ್ಲೆಯಲ್ಲಿ ನಾನು ಮತ್ತು ಸಂಘಟಿಕರು ಎಲ್ಲಾ ತಾಲೂಕುವಾರು ಸದಸ್ಯತ್ವ ಮಾಡಿಸಿ ಸಂಘಟನೆಗೆ ಬಲ ತುಂಬುವ ಕಾರ್ಯ ಮಾಡಲಾಗುತ್ತದೆ. ಜೊತೆಗೆ ಜನರ ಸೇವೆ ನಿರಂತರ ನಡೆಸಲಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಭಾರತೀಯರ ಸೇವಾ ಸಮಿತಿಯ ಪದಾಧಿಕಾರಿಗಳಾದ ಸಿ.ಲೋಕೇಶ್, ಶ್ರೀರಾಮ, ಕೆಜಿಫ್ ಎಂ.ಹರಿದಾಸ್ ಕೆಜಿಫ್ ಮಂಜುಳಾ, ಬಂಗಾರಪೇಟೆ ನರಸಿಂಹ, ಮಾಲೂರು ಹರೀಶ್ ಮತ್ತಿತರರು ಹಾಜರಿದ್ದರು