ಮಹಿಳಾ ಕಾಲೇಜಿನ ಹೊಸ ಕಟ್ಟಡ ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸುಧಾಕರ್ ಸೂಚನೆ

ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ 5 ಕೋಟಿ ಅನುದಾನ ಬಿಡುಗಡೆಯಾಗಿದೆ ಅದನ್ನು ಯೋಜನಾ ಬದ್ದವಾಗಿ ಬಳಸಿಕೊಂಡು ಕಟ್ಟಡಗಳನ್ನು ಕಟ್ಟದೇ ಬೇಕಾಬಿಟ್ಟಿ ಕಟ್ಟಲು ಹೋದರೆ ಮುಂದೆ ಜಾಗದ ಸಮಸ್ಯೆಯಾಗಲಿದ್ದು ಕೂಡಲೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅಧಿಕಾರಿಗಳಿಗೆ ಆದೇಶ ನೀಡಿದರು.

ನಗರದಲ್ಲಿರುವ ಮಹಿಳಾ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕಾಲೇಜಿನಲ್ಲಿ ಜಾಗ ಇದೆ ಅಂತ ಹೇಗೆ ಬೇಕಾದರೆ ಹಾಗೇ ಕಟ್ಟಿಕೊಂಡು ಹೋದರೆ ಮುಂದೆ ವಿಧ್ಯಾರ್ಥಿಗಳು ಒಡಾಡಕ್ಕೂ ಜಾಗ ಇರಲ್ಲ ಪ್ರಾಂಶುಪಾಲರು ಇದರ ಜವಾಬ್ದಾರಿ ವಹಿಸಿಕೊಂಡು ಮುಂದಾಲೋಚನೆ ವಹಿಸಬೇಕು ಚಿಕ್ಕ ಚಿಕ್ಕ ಕಬ್ಬಿಣ ಹಾಕಿ ಐದು ಅಂತಸ್ತು ಕಟ್ಟತ್ತೀವಿ ಅಂದರೆ ಅದು ಹೇಗೆ ಸಾಧ್ಯ ಮುಂದೆ ಒಂದು ಪ್ಲಾನ್ ಕೊಡತ್ತೇವೆ ಅಲ್ಲಿ ತನಕ ಕೆಲಸ ನಿಲ್ಲಿಸಿ ಎಂದರು.

ಬಾಲಕರ ಕಾಲೇಜಿನಲ್ಲೂ ಕಳಪೆ ಕಾಮಗಾರಿಯಾಗಿದೆ ಎಂದು ವರದಿಯಾಗಿದೆ ಕೂಡಲೇ ಎನ್.ಡಿ.ಟಿ ವತಿಯಿಂದ ಪರಿಶೀಲನೆ ನಡೆಸಿ ಯಾರು ಗುತ್ತಿಗೆದಾರರು ಯಾವ ಏಜೆನ್ಸಿ ಅಂತ ಕೂಡಲೇ ವರದಿ ಕೊಡಬೇಕು ಎಂದು ಆದೇಶ ನೀಡಿದರು ಇದೇ ಸಂದರ್ಭದಲ್ಲಿ ಕಾಲೇಜಿನ ಶೌಚಾಲಯ ಸೇರಿದಂತೆ ನೀರಿನ ವ್ಯವಸ್ಥೆ ಸರಿಯಾಗಿಲ್ಲ ವಿಧ್ಯಾರ್ಥಿಗಳು ಕಂಡಾಗ ಬಸ್ ನಿಲ್ಲಿಸಲ್ಲ ಎಂದು ವಿಧ್ಯಾರ್ಥಿಗಳು ಸಚಿವರ ಮುಂದೆ ಇಟ್ಟರು ಕೂಡಲೇ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು ನೋಡಿ ಇಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಬರೋದು ಅವರ ಯೋಗಕ್ಷೇಮ ಮುಖ್ಯ ಮುಂದೆ ಈ ರೀತಿಯಲ್ಲಿ ಆಗದಂತೆ ನೋಡಿಕೊಳ್ಳಿ ಕೆ.ಎಸ್.ಆರ್.ಟಿ.ಸಿ ಡಿಸಿಗೆ ಪೋನ್ ಮಾಡಿ ನಿಮ್ಮ ಬಸ್ ಚಾಲಕರು ಮತ್ತು ನಿರ್ವಾಹಕರು ಬಾಸ್ ಗಳು ಆಗಿದ್ದಾರೆ ನೀವು ನೇರವಾಗಿ ಆದೇಶ ಮಾಡುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರ ಮುಂದೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಾಗ ಯಾಕೆ ನಾನು ಇಲ್ಲೇ ಇದ್ದಾಗ ಯಾಕೆ ಗಮನಕ್ಕೆ ತರಲಿಲ್ಲ ನಾನೇ ಸ್ವಂತ ಹಣದಲ್ಲಿ ಬೋರ್ ವೆಲ್ ಹಾಕಿಸಿ ನೀರು ವ್ಯವಸ್ಥೆ ಮಾಡಿದ್ದೇನೆ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಗಂಗಾಧರ್ ರಾವ್ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಮಲೇಷಿಯಾ ರಾಜಕುಮಾರ್ ಮುಂತಾದವರ ಇದ್ದರು

Leave a Reply

Your email address will not be published. Required fields are marked *