ಕೋಲಾರ: ಜಿಲ್ಲಾ ಕಾಂಗ್ರೆಸ್ ಸಂಘಟನಾತ್ಮಕ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಕುಂಬಾರು ಸಮಾಜದ ಪ್ರಭಾವಿ ಮುಖಂಡರಾದ ಲಕ್ಷ್ಮಿನಾರಾಯಣ ಅವರ ಮೇಲೆ ನಡೆದ ಹಲ್ಲೆಯನ್ನು ನಮ್ಮ ಸಮಾಜವು ತೀವ್ರವಾಗಿ ಖಂಡಿಸಲಿದರ ಸಮುದಾಯವು ಅವರ ಪರವಾಗಿ ನಿಲ್ಲಲಿದೆ ಎಂದು ಜಿಲ್ಲಾ ಕುಂಬಾರ ಸಂಘ ಹಾಗೂ ದಕ್ಷಿಣ ಭಾರತ ಕುಂಬಾರರ ಫೆಡರೇಶನ್ ಯುವ ಘಟಕದ ಅಧ್ಯಕ್ಷ ಮಾಲೂರು ಡಾ.ನಾಗರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಕುಂಬಾರ ಸಮಾಜವು ರಾಜ್ಯದಲ್ಲಿ ಸಣ್ಣಪುಟ್ಟ ಸಮುದಾಯಗಳಲ್ಲಿ ಒಂದಾಗಿದ್ದು ಅಂತಹ ಸಮಾಜಕ್ಕೆ ಅಧಿಕಾರ ಸಿಗುವುದು ಕಷ್ಟ ವಿನಾಕಾರಣ ಹಲ್ಲೆ ಮತ್ತು ದೌರ್ಜನ್ಯ ಮಾಡಿರುವುದು ಖಂಡನೀಯವಾಗಿದ್ದು ಯಾವುದೇ ಪಕ್ಷದಲ್ಲಿ ಸಮುದಾಯದ ಮುಖಂಡರು ಬೆಳೆಯುತ್ತಿದ್ದರೆ ಅವರ ಬೆಂಬಲವಾಗಿ ಕುಂಬಾರ ಸಮುದಾಯವು ನಿಲ್ಲಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಪಕ್ಷದ ನಿಷ್ಠಾವಂತ ಮುಖಂಡರು ಜೊತೆಗೆ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ಅವರ ಮೇಲೆ ನಡೆದ ಹಲ್ಲೆಯಂತಹ ಘಟನೆಗಳು ಮುಂದೆ ಯಾರ ಮೇಲು ಕೂಡ ನಡೆಯಬಾರದು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನಾಂಗ ವತಿಯಿಂದ ಉಗ್ರವಾಗ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕುಂಬಾರ ಸಮುದಾಯದ ಮುಖಂಡರಾದ ತಬಲ ನಾರಾಯಣಪ್ಪ, ಕಲ್ಲಂಡೂರು ಶ್ರೀನಿವಾಸಪ್ಪ, ನಾಗೇಶ್, ಗಂಗಾರಾಜು ಕೆಂಬೋಡಿ ಶ್ರೀನಿವಾಸ್ ಮುಂತಾದವರು ಇದ್ದರು.
ನಮ್ಮ ವಾಟ್ಸಪ್ ಗ್ರೂಪ್: 8123492317
ನಮ್ಮ ಟೆಲಿಗ್ರಾಂ ಗ್ರೂಪ್: 8123492317