ಟೇಕಲ್ ನಲ್ಲಿ ಕರ್ನಾಟಕ ಜನ ಸೇವಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕೋಲಾರ: ಹಲವಾರು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಜನಸೇವಕರ ಸಂಘವು ಕನ್ನಡ ಭಾಷೆ, ನೆಲೆ ಜೊತೆಗೆ ಜನರ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ, ಕನ್ನಡ ಪರ ಸಂಘಟನೆಗಳು ಎಂದರೆ ನಾಡು, ಭಾಷೆ, ಗಡಿ ರಕ್ಷಣೆ ದುಡಿಯುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ಸೋಮವಾರ ಕರ್ನಾಟಕ ಜನ ಸೇವಕ ಸಂಘವು ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಾಡ ಭಾವುಟ ಹಾರಿಸಿ ಮಾತನಾಡಿದ ಶಾಸಕ ಕೆವೈ ನಂಜೇಗೌಡರು, ಸಂಘದ ಸಂಸ್ಥಾಪಕ ಅಧ್ಯಕ್ಷ ಉಳ್ಳೇರಹಳ್ಳಿ ಮಂಜುನಾಥಗೌಡರ ಸೇವೆ ಅಪಾರವಾದದ್ದು ಪ್ರತಿವರ್ಷ ರಾಜ್ಯೋತ್ಸವದಂದು ಸಂತ್ರಸ್ತರಿಗೆ ಅಕ್ಕಿ, ಬೇಳೆ, ತರಕಾರಿ, ಸೀರೆ, ಬಟ್ಟೆಗಳನ್ನು ನೀಡುತ್ತಿದ್ದಾರೆ. ದಿವ್ಯಾಂಗರಿಗೆ ವಾಕರ್, ಶಾಲಾ ಮಕ್ಕಳಿಗೆ ಪುಸ್ತಕ, ಶೈಕ್ಷಣಿಕ ಸಾಮಗ್ರಿಗಳನ್ನು ನೀಡುತ್ತಾ ಉತ್ತಮ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲರೂ ಕನ್ನಡ ಭಾಷೆ ಮಾತಾಡಬೇಕು ಕನ್ನಡ ಶಾಲೆಗಳಲ್ಲಿಯೂ ಮಕ್ಕಳನ್ನು ದಾಖಲಿಸಬೇಕು. ಜೊತೆಗೆ ಆಂಗ್ಲ ಭಾಷೆಯನ್ನು ಕಲಿಯಬೇಕು. ವ್ಯಾಪಾರಸ್ಥರು, ವಾಣಿಜ್ಯ ಮಳಿಗೆಯವರು ಮತ್ತು ಇತರೆ ಅಂಗಡಿ ವಹಿವಾಟಿನವರು ಕನ್ನಡ ಭಾಷೆ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ವ್ಯಾಸಂಗ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡ 60ರಷ್ಟು ಮೀಸಲಾತಿಯನ್ನು ಸಿಎಂ ಸಿದ್ದರಾಮಯ್ಯನವರು ಕಲ್ಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸುವ ಮೂಲಕ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ಬದುಕಿನ ಭಾಷೆಯಾಗಿದ್ದು ಜೊತೆಗೆ ಜೀವನ ಕ್ಕಾಗಿ ಆಂಗ್ಲ ಭಾಷೆಯನ್ನು ಸಹ ಕಲಿಯಬೇ ಕಾಗಿದೆ ಅನ್ಯ ಭಾಷೆಗಳಿಗೂ ಸಹ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ನಮ್ಮ ಭಾಷೆ ಯನ್ನು ಶ್ರೀಮಂತ ಗೊಳಿಸೋಣ ಎಂದರು.

ಕರ್ನಾಟಕ ಜನಸೇವಕ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ.ವಿ.ಆರ್ ಮಂಜುನಾಥಗೌಡ ಮಾತನಾಡಿ, ಪ್ರತಿವರ್ಷವು ನಿರಂತರವಾಗಿ ನಿರ್ಗತಿಕರಿಗೆ ದಿನಸಿ, ಮಹಿಳೆಯರಿಗೆ ಸೀರೆ ಹಾಗೂ ವಿಶೇಷಚೇತನರಿಗೆ ಪರಿಕರಗಳಾದ ಊರುಗೋಲು (ವಾಕಿಂಗ್ ಸ್ಟಿಕ್) ಗಾಲಿಚೇರು, ಅಕ್ಕಿ ವಿತರಣೆ ಮಾಡುತ್ತಿದ್ದು ಈ ಬಾರಿಯೂ ನೂರಾರು ಸಂತ್ರಸ್ತರಿಗೆ ನೀಡಲಾಗಿದೆ. ಆರೋಗ್ಯ ಚಿಕತ್ಸೆಗೆ ಸಹಾಯ ಹಾಗೂ ಬಡಮಕ್ಕಳಿಗೆ ಶೈಕ್ಷಣಿಕ ಸಹಕಾರ ಸೇರಿದಂತೆ ಹಲವಾರು ಸಮಾಜ ಸೇವೆ ಕಾರ್ಯ ಮಾಡುತ್ತಾ ಬಂದಿದ್ದು ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಜಿ.ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಗ್ರಾ.ಪಂ.ಸದಸ್ಯ ಎಂ.ಮುರುಗೇಶ, ದರಖಾಸ್ತು ಸಮಿತಿ ಸದಸ್ಯ ಬಿ.ಜಿ.ಸತೀಶ್‌ಬಾಬು, ಪ್ರಗತಿ ಶ್ರೀನಿವಾಸ್, ಶೆಟ್ಟಹಳ್ಳಿ ರಾಮಮೂರ್ತಿ ರಾಜ್ಯ ಪ್ರಧಾನಕಾರ್ಯದರ್ಶಿ ಉಳ್ಳೇರಹಳ್ಳಿ ವೆಂಕಟೇಶ್, ಜಿಲಾ ಅಧ್ಯಕ್ಷ ಎಸ್.ಪ್ರಕಾಶ್, ತಾಲ್ಲೂಕು ಅಧ್ಯಕ್ಷ ದೊಡ್ಡಮಲ್ಲೆ ಚಲಪತಿಗೌಡ, ಶ್ಯಾಮ್, ಶಶಿಧ‌ರ್, ಜಂಗಾನಹಳ್ಳಿ ಶ್ರೀನಿವಾಸ್, ಕೆಂಪಣ್ಣ, ರಾಜೇಶ್, ರಾಜೇಂದ್ರ, ಶ್ರೀಕಂಠಮೂರ್ತಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *