ಕೊರಟಾಲ ಶಿವ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಅಭಿನಯದ ‘ದೇವರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ದೇವರ ಟ್ರೇಲರ್ ಅನ್ನು ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಟ್ರೇಲರ್ನಲ್ಲಿ ಎನ್ಟಿಆರ್ ತುಂಬಾ ಪವರ್ಫುಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಛಾಯೆಯ ದೃಶ್ಯಗಳು ಹಾಗೂ ಬೀಚ್ನಲ್ಲಿನ ಹೊಡೆದಾಟದ ದೃಶ್ಯಗಳು ಮೈಜುಮ್ಮೆನಿಸುತ್ತವೆ. ಒಟ್ಟು 2 ನಿಮಿಷ 39 ಸೆಕೆಂಡುಗಳ ಟ್ರೇಲರ್ನಲ್ಲಿ ಕೊರಟಾಲ ಅವರು ದೇವರ ಜಗತ್ತನ್ನು ತೋರಿಸಿದ್ದಾರೆ.
ಭಾರಿ ಬಜೆಟ್ನಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ.ಕೆ ಜಂಟಿಯಾಗಿ ದೇವರ ಚಿತ್ರವನ್ನು ನಿರ್ಮಿಸಿದ್ದಾರೆ. ದೇವರ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದರೆ, ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ದೇವರ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳಿವೆ. ವಿದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಟಿಕೆಟ್ಗಳು ಮಾರಾಟವಾಗಿವೆ. ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಬಿಡುಗಡೆಗೂ ಮುನ್ನ ಈ ಮಟ್ಟಕ್ಕೆ ದಾಖಲೆ ಬರೆದಿರುವ ಸಿನಿಮಾ ರಿಲೀಸ್ ನಂತರ ಬಾಕ್ಸ್ ಆಫೀಸ್ ದೋಚುವುದು ಖಚಿತ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.