KGF: ನೂರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಅನರ್ಹರಿಗೆ ಮಂಜೂರು!?

ಕೋಲಾರ: ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿರುವ ಆರೋಪದಡಿ ಕೋಲಾರ ಲೋಕಾಯುಕ್ತದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಸುಜಾತ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಅಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಕೆಜಿಎಫ್ ತಾಲ್ಲೂಕಿನ ಸುಂದ್ರಪಾಳ್ಯ ಗ್ರಾಮದ ವೆಂಕಟರಾಮಪ್ಪ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅವರು 2017 ರಲ್ಲಿ ನಾನು ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮೀಕರಣ ಸಮಿತಿ ಸದಸ್ಯನಾಗಿದ್ದು, ಮಾಜಿ ಶಾಸಕಿ ವೈ ರಾಮಕ್ಕ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಮೂರು ಸಭೆಗಳಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿಕೊಂಡಿರುವ ಫಲಾನುಭವಿಗಳ ಅರ್ಜಿಗಳ ಕುರಿತು ನಿರ್ಣಯ ಕೈಗೊಂಡಿರುವುದಿಲ್ಲ ಎಂದು ವಿವರಿಸಿದರು.

ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2017 ರಲ್ಲಿ ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮೀಕರಣ ಸಮಿತಿ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡುವ ಸಲುವಾಗಿ ಸಭೆಯಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿದ್ದರೂ 223 ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡುವ ಮೂಲಕ ಸರ್ಕಾರಕ್ಕೆ 523 ಎಕರೆ ಜಮೀನು ವಂಚನೆ ಮಾಡಿರುವ ಕುರಿತು ಲೋಕಾಯುಕ್ತ ಕಛೇರಯಲ್ಲಿ ಸಾಮಾಜಿಕ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೋಲೀಸರು ತನಿಖೆ ಕೈಗೊಂಡಿದ್ದರು. ದರಕಾಸ್ತು ಕಮಿಟಿ ಸದಸ್ಯನಾಗಿದ್ದ ನನಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ತನಿಖಾ ವೇಳೆಯಲ್ಲಿ ದಾಖಲೆಗಳನ್ನು ನೋಡಿದಾಗ ಅಧಿಕಾರಿಗಳು ಅಕ್ರಮ ಮಾಡಿರುವುದು ಕಂಡು ಬಂದಿದೆ ಎಂದರು.

ಮೇಲ್ನೋಟಕ್ಕೆ ಅಕ್ರಮ ಮಂಜೂರು ಮಾಡಿರುವ ಅಂಶಗಳಗಳು ಬೆಳಕಿಗೆ ಬಂದಿದ್ದರ ಭಾಗವಾಗಿ ಬಂಗಾರಪೇಟೆ ತಹಶೀಲ್ದಾರ್ ಸುಜಾತ, ಕೆ.ಸಿ ಸುರೇಶ್ ಉಪ ತಹಶೀಲ್ದಾರ್ ಹಾಲಿ ಚುನಾವಣೆ ತಹಶೀಲ್ದಾರ್ ಕೋಲಾರ ಜಿಲ್ಲೆ. ಆರ್ ಪವನ್ ಕುಮಾರ್ ದ್ವಿತೀಯ ದರ್ಜೆ ಸಹಾಯಕ ಹಾಲಿ ಕೆಜಿಎಫ್ ತಾಲ್ಲೂಕು. ವಿರುದ್ದ ಪ್ರಕರಣ ದಾಖಲಾಗಿ 10 ದಿನಗಳು ಕಳೆದರು ಇಲಾಖೆಯಿಂದ ಅಧಿಕಾರಿಗಳನ್ನು ಅಮನತ್ತುಗೊಳಿಸುವಲ್ಲಿ ವಿಫಲರಾಗುವ ಮೂಲಕ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಕಿಡಿಕಾರಿದರು.

ಕೆಜಿಎಫ್ ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ 2017ರಲ್ಲಿ ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮಣ ಸಮಿತಿ ಸಭೆಯನ್ನು ಅಂದಿನ ಶಾಸಕರು ಹಾಗೂ ಸಮಿತಿ ಅಧ್ಯಕ್ಷರಾದ ವೈ ರಾಮಕ್ಕ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಅಂದು ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನಂತರ ಎರಡು ಭಾರಿ ನಡೆದ ಸಭೆಗಳಲ್ಲಿಯೂ ಯಾವುದೇ ನಿರ್ಣಯ ಕೈಗೊಳ್ಳದಿದ್ದರೂ ಅಧಿಕಾರಿಗಳು ಅಕ್ರಮವಾಗಿ ಹಣ ಪಡೆದು ನೆರೆಯ ಆಂದ್ರಪ್ರದೇಶದ ವ್ಯಕ್ತಿಗಳನ್ನೊಳಗೊಂಡಂತೆ, 223 ಅನರ್ಹ ಫಲಾನುಭವಿಗಳ ಹೆಸರನ್ನು ದರಸಕಾಸ್ತು ಪುಸ್ತಕದಲ್ಲಿ ಸೇರಿಸಿ ಸಾಗುವಳಿ ಚೀಟಿ ನೀಡಿ ಜಮೀನು ಮಂಜೂರು ಮಾಡಿ ಖಾತೆ ಮಾಡಿದ್ದಾರೆ ಎಂದು ತಿಳಿಸಿದರು.

ದೂರುದಾರ ವೆಂಕಟೇಶ್ ಗೌಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಸರ್ಕಾರಿ ಜಮೀನು ಮಂಜೂರು ಕುರಿತು ಅಕ್ರಮಗಳು ನಡೆದಿದೆ ಎಂದು ಲೋಕಾಯುಕ್ತ ಪೋಲೀಸರಿಗೆ 2023 ರಲ್ಲಿ ದೂರು ಸಲ್ಲಿಸಿದ್ದು, ದೂರಿನಲ್ಲಿ ಬಂಗಾರಪೇಟೆ ತಾಲ್ಲೂಕು ಕಛೇರಿಯಿಂದ ಕೆಜಿಎಫ್ ತಾಲ್ಲೂಕಿಗೆ ಸಲ್ಲಿಸಿಕೊಂಡಿರುವ 40 ಭೂ ಮಂಜೂರಾತಿ ಕಡತಗಳನ್ನು ನೈಜತೆಯನ್ನು ಪರಿಶೀಲಿಸಿದೇ ಅನರ್ಹ ಫಲಾನುಭವಿಗಳಿಗೆ ಖಾತೆ ಮಾಡಿರುವುದು ತಿಳಿದು ಬಂದಿರುತ್ತದೆ.

ಅಂದಿನ ಕೆಜಿಎಪ್ ಶಾಸಕಿ ವೈ.ರಾಮಕ್ಕ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಯಾವುದೇ ಕಡತಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳದಿದ್ದರೂ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ಫಲಾನುಭವಿಗಳಿಗೆ ಕೋಟ್ಯಾಂತರ ಬೆಲೆ ಬಾಳುವ ಸರ್ಕಾರದ ಜಮೀನುಗಳನ್ನು ಮಂಜೂರು ಮಾಡಿದ್ದಾರೆ. ಅದರಂತೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಇಲಾಖೆ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಸರ್ಕಾರ ಇಂತಹ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ಇವರ ಅಧಿಕಾರವದಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ತನಿಖೆ ನಡೆಸಲು ವಿಶೇಷ ತಂಡವನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ಕಛೇರಿಯಲ್ಲಿ ಪ್ರಕರಣ ದಾಖಲಾಗುವುದನ್ನು ಅರಿತು ಸರ್ಕಾರದ ಮೇಲೆ ತನ್ನ ಪ್ರಭಾವ ಭೀರಿ ಸಾಕ್ಷ ನಾಶಪಡಿಸಲು ಮುಜರಾಯಿ ತಹಶೀಲ್ದಾರ್ ಹುದ್ದೆಯಿಂದ ತಮ್ಮ ಮೂಲ ಸ್ಥಾನವಾಗಿದ್ದ ಬಂಗಾರಪೇಟೆ ತಾಲ್ಲೂಕು ಕಚೇರಿಗೆ ತಹಶೀಲ್ದಾರ್ ಸುಜಾತ ಅವರಿಗೆ ಸರ್ಕಾರದಿಂದ ವರ್ಗಾವಣೆ ಆದೇಶ ಬಂದ ತಕ್ಷಣ ಅಧಿಕಾರ ವಹಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಪಡಿಸಬೇಕು ಇಲ್ಲವಾದಲ್ಲಿ ಸರ್ಕಾರಿ ಜಮೀನು ಮಂಜೂರಿನಲ್ಲಿ ನಡೆದಿರುವ ಅಕ್ರಮಗಳ ದಾಖೆಲೆಗಳನ್ನು ನಾಶ ಪಡಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ವೆಂಕಟಾಚಲಪತಿ ಇದ್ದರು

Leave a Reply

Your email address will not be published. Required fields are marked *