Ganesha Chaturthi 2024: ಮನೆಯಲ್ಲಿ ಪೂಜೆ ಮಾಡಲು ಗಣೇಶನ ಸೊಂಡಿಲು ಯಾವ ಕಡೆ ಇದ್ರೆ ಒಳ್ಳೆಯದು?

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಜೋರಾಗಿದೆ. ದೊಡ್ಡ ದೊಡ್ಡ ಗಣೇಶನ ವಿಗ್ರಹಗಳು ಸಹ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಪ್ರಥಮ ಪೂಜಿತ, ವಿಘ್ನ ನಿವಾರಕ, ವಿನಾಯಕನಿಗೆ ಯಾವುದೇ ಶುಭಕಾರ್ಯದಲ್ಲಿ ಪ್ರಥಮ ಪೂಜೆ ನೆರವೇರಿಸುವುದು ಸಂಪ್ರದಾಯ. ಹಾಗಾಗಿ ಚಿಕ್ಕ ಚಿಕ್ಕ ಗಣೇಶನ ವಿಗ್ರಹಗಳನ್ನು ತಂದು ಮನೆಯಲ್ಲಿ ಪೂಜೆ ಮಾಡಲಾಗುತ್ತದೆ. ಆದ್ರೆ ವಿನಾಯಕನ ಮೂರ್ತಿಯನ್ನು ತರುವಾಗ ಅನೇಕರಿಗೆ ಒಂದು ಗೊಂದಲ ಇರುತ್ತೆ. ಯಾವ ಕಡೆ ಸೊಂಡಿಲಿರುವ ಗಣೇಶನನ್ನು ಮನೆಗೆ ತರಬೇಕು ಎಂದು? ಹೀಗಾಗಿ ಗಣೇಶನ ಸೊಂಡಿಲು ಯಾವ ದಿಕ್ಕಿಗೆ ಇರಬೇಕು? ಅದರ ಅರ್ಥವೇನು ಎಂಬ ಅನೇಕ ವಿಚಾರಗಳ ಬಗ್ಗೆ ತಿಳಿಯಿರಿ.

ಬಲ ಸೊಂಡಿಲಿರುವ ಗಣೇಶ ಏನನ್ನು ಸೂಚಿಸುತ್ತದೆ?
ಬಲ ಸೊಂಡಿಲು ಇರುವ ಗಣಪತಿ ಕಾಣಸಿಗುವುದು ಬಹುತೇಕ ಅಪರೂಪ. ಬಲ ಸೊಂಡಿಲಿನ ಗಣೇಶ ಮೂರ್ತಿಗಳನ್ನು ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದಲ್ಲಿರುವ ಗಣೇಶನ ವಿಗ್ರಹದ ಸೊಂಡಿಲು ಬಲಕ್ಕೆ ಬಾಗಿದೆ. ಗಣಪತಿಯ ಪತ್ನಿಯರಲ್ಲಿ ಒಬ್ಬರಾದ ಸಿದ್ಧಿ ಗಣಪತಿಯ ಬಲಭಾಗದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಬಲಕ್ಕೆ ಬಾಗಿದ ಸೊಂಡಿಲನ್ನು ಹೊಂದಿರುವ ವಿಗ್ರಹವನ್ನು ಸಿದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ. ಬಲ ಭಾಗದಲ್ಲಿ ಸೊಂಡಿಲಿರುವ ಗಣಪತಿ ವಿಗ್ರಹಗಳು ದೇವಾಲಯಗಳಲ್ಲಿ ಮಾತ್ರ ಕಂಡುಬರುತ್ತವೆ. ಆದ್ರೆ ಮನೆಗಳಲ್ಲಿ ಪೂಜಿಸುವುದಿಲ್ಲ. ಏಕೆಂದರೆ ಬಲಭಾಗದ ಸೊಂಡಿಲು ಎಲ್ಲ ಲೌಕಿಕ ಸುಖಗಳಿಂದ ಮುಕ್ತಿ ಮತ್ತು ಮೋಕ್ಷವನ್ನು ಸಾಧಿಸುತ್ತದೆ. ಕುಟುಂಬ ಹೊಂದಿರುವ ಜನರು ಕರ್ತವ್ಯಗಳನ್ನು ಹೊಂದಿರುವುದರಿಂದ ಮತ್ತು ಸಂತೋಷಗಳನ್ನು ಬಿಡಲು ಸಾಧ್ಯವಿಲ್ಲದ ಕಾರಣ ಇದು ಕುಟುಂಬಸ್ಥರಿಗೆ ಅಲ್ಲ.

ನೇರ ಸೊಂಡಿಲಿರುವ ವಿನಾಯಕ:
ಇನ್ನು ನೇರ ಸೊಂಡಿಲ ಗಣಪನ ವಿಚಾರಕ್ಕೆ ಬಂದರೆ ಅದು ಅತ್ಯಂತ ಅಪರೂಪವಾಗಿದೆ. ನೇರ ಸೊಂಡಿಲು ಗಣೇಶನ ಮೂರ್ತಿಯು ಆಳವಾದ ಮಹತ್ವವನ್ನು ಹೊಂದಿದೆ. ಇದರರ್ಥ ಸುಶುಮಾ ನಾಡಿ ಈಗ ಮುಕ್ತವಾಗಿದೆ. ಎಲ್ಲ ದೇಹ ಇಂದ್ರಿಯಗಳ ನಡುವೆ ಸಂಪೂರ್ಣ ಏಕತೆ ಇದೆ. ಹಾಗೇ ದೈವತ್ವವು ಸಂಪೂರ್ಣವಾಗಿದೆ. ನೀವು ಸಂಪೂರ್ಣವಾಗಿ ಪಾರದರ್ಶಕರಾಗಿದ್ದೀರಿ ಎಂದರ್ಥ.  ನೇರ ಸೊಂಡಿಲು ರೀತಿಯ ಗಣಪತಿಯನ್ನು ಸಾಮಾನ್ಯವಾಗಿ ಪೂಜಿಸಬಹುದು.

ಇದನ್ನೂ ಓದಿ: Horoscope 2024: ಸೆಪ್ಟೆಂಬರ್ 6ರ ಶುಕ್ರವಾರ ನಿಮ್ಮ ರಾಶಿಗಳ ಫಲಾಫಲ ಹೇಗಿದೆ ನೋಡಿ

ಏಡ ಸೊಂಡಿಲಿರುವ ಗಣಪ:
ಎಡ ಸೊಂಡಿಲ ಗಣೇಶ ಅತ್ಯಂತ ಜನಪ್ರಿಯವಾಗಿದೆ. ಹೆಚ್ಚಾಗಿ ಎಡಕ್ಕೆ ಸೊಂಡಿಲು ಹೊಂದಿರುವ ವಿಗ್ರಹವನ್ನು ಜನ ಖರೀದಿಸುತ್ತಾರೆ. ಇನ್ನು ಮನೆಯಲ್ಲಿಡುವ ಗಣಪತಿಯ ಮೂರ್ತಿಯು ಯಾವಾಗಲೂ ಕುಳಿತುಕೊಳ್ಳುವ ಭಂಗಿಯಲ್ಲಿದ್ದು, ಗಣೇಶನ ಸೊಂಡಿಲು ಯಾವಾಗಲೂ ಲಡ್ಡು, ಮೋದಕಗಳ ಹತ್ತಿರ ಇರಬೇಕು. ಎಡಕ್ಕೆ ಬಾಗಿದ ಸೊಂಡಿಲನ್ನು ಎಡಮುರಿ ಗಣಪ ಎಂದು ಕರೆಯಲಾಗುತ್ತದೆ. ಗಣೇಶನ ಎಡಭಾಗವು ಚಂದ್ರನ ಗುಣಗಳನ್ನು ಹೊಂದಿದ್ದು, ಶಾಂತಿಯುತ ಮತ್ತು ಆನಂದ ತರುತ್ತದೆ. ಅಲ್ಲದೆ, ಆ ಭಾಗವು ಭೌತಿಕ ಲಾಭಗಳು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.  ಹಾಗಾಗಿ ಎಡ ಭಾಗದಲ್ಲಿ ಸೊಂಡಿಲು ಇರುವ ಗಣೇಶನ ವಿಗ್ರಹಗಳನ್ನು ತಂದು ಮನೆಯಲ್ಲಿ ಪೂಜೆ ಮಾಡುವುದರಿಂದ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.

Leave a Reply

Your email address will not be published. Required fields are marked *