
ಕೋಲಾರ: ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಪಕ್ಷದಿಂದ ನಗರದ ನಾನಾ ಕಡೆಯಲ್ಲಿ 134 ಸಸಿಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ನಗರದ ಡೂಂಲೈಟ್ ಸರ್ಕಲ್ ಬಳಿ ಸಸಿ ನೆಟ್ಟು ಮಾತನಾಡಿದ ಅವರು, ಬಾಬಾ ಸಾಹೇಬರು ಸಂವಿಧಾನ ರಕ್ಷಣೆ ಮಾಡಿದ ರೀತಿಯಲ್ಲಿ ಬಿಜೆಪಿ ಇದೀಗ ಪರಿಸರ ಸಂರಕ್ಷಣೆಗೆ ಪಣ ತೊಟ್ಟಿದ್ದು ರಾಜ್ಯಾಧ್ಯಕ್ಷರ ಸಲಹೆ ಮೇರೆಗೆ ಅಂಬೇಡ್ಕರ್ ಜಯಂತಿಗೆ ಹಸಿರುಹಬ್ಬ ಆಚರಿಸಲಾಗುತ್ತಿದೆ ಎಂದರು. ಅಂಬೇಡ್ಕರ್ ಜಯಂತಿಗೆ ಸ್ವಚ್ಛತಾ ಅಭಿಯಾನ, ಉದ್ಯಾನವನಗಳ ಸ್ವಚ್ಛತೆ ಮಾಡಲಾಗಿದ್ದು ಜತೆಗೆ ಪ್ರಾಣಿಪಕ್ಷಿ ಸಂಕುಲಕ್ಕೆ ಸಹಕಾರಿಯಾದ ಹಣ್ಣುಗಳ ಗಿಡಗಳನ್ನು ನೆಡಲಾಗಿದ್ದು ಪಕ್ಷದಿಂದ ಪೋಷಣೆ ಮತ್ತು ನಿರ್ವಹಣೆಯನ್ನೂ ಮಾಡಲಾಗುತ್ತದೆ. ಅರಣ್ಯ ಇಲಾಖೆಯೂ ಸಹಾ ಸಸಿ ನೆಡುವ ಅಭಿಯಾನದಲ್ಲಿ ಕೈ ಜೋಡಿಸಿದೆ ಎಂದು ಚಲಪತಿ ನುಡಿದರು.
ಬಿಜೆಪಿ ಮುಖಂಡರಾದ ಶಶಿ, ಅಪ್ಪಿರಾಜು, ಅಪ್ಪಿ ನಾರಾಯಣ
ಸ್ವಾಮಿ, ಜಯ ಶಿವಕುಮಾರ್, ಸುಧಾಕರ್,ಬಾಬು,ಕುಮಾರ್, ರಾಜೇಶ್‌ಸಿಂಗ್, ಅರುಣಮ್ಮ, ಸತಾ ಶ್ರೀನಾಥ್, ಗಜಲಕ್ಷ್ಮಿ, ಪದ್ಮಾ, ಅನಿತ, ಭಾರತಿ, ಲಕ್ಷ್ಮೀ, ಸುಜಾತಾ, ಇತರರು ಉಪಸ್ಥಿತರಿದ್ದರು.