ಕೋಲಾರದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಡವರಿಗೆ ಬಟ್ಟೆ ವಿತರಣೆ

 

ಕೋಲಾರ: ಕೇವಲ ರಾಜಕಾರಣಕ್ಕಾಗಿ ಧರ್ಮ ಧರ್ಮಗಳ ಮಧ್ಯೆ ಗಲಾಟೆಗಳನ್ನು ನೆಡೆಸಿ ತಮ್ಮ ಸ್ವಾರ್ಥಕ್ಕಾಗಿ ಕೋಮುಗಲಭೆ ಸೃಷ್ಟಿಸುವುದನ್ನು ಬಿಟ್ಟು ಜಾತ್ಯಾತೀತ ರಾಷ್ಟ್ರದಂತೆ ಏಸು ಕ್ರಿಸ್ತನ ಸಂದೇಶಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ದಾರಿಯಲ್ಲಿ ನಡೆಯಬೇಕಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಹಾಗೂ ಕ್ರೈಸ್ತ ಯುವ ಮುಖಂಡ ಟಿ.ಎಸ್ ಸುಧೀರ್ ಅವರ ನೇತೃತ್ವದಲ್ಲಿ ಬಡವರಿಗೆ ಬಟ್ಟೆ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು ರಾಜಕೀಯದ ಹೆಸರಲ್ಲಿ ಧರ್ಮಗಳನ್ನು ತರಬಾರದು ಎಲ್ಲರನ್ನೂ ಪ್ರೀತಿ, ವಿಶ್ವಾಸ, ಗೌರವ, ಹಾಗೂ ಸಹಬಾಳ್ವೆಯಲ್ಲಿ ಕರೆದುಕೊಂಡು ಹೋಗುವ ಗುಣ ಪ್ರತಿಯೊಬ್ಬರಲ್ಲೂ ಬರಬೇಕು ಪಕ್ಕದಲ್ಲಿರುವ ಯಾವುದೇ ಧರ್ಮದ ಮನುಷ್ಯನಾದರೂ ಕೂಡ ಅವನು ನನ್ನ ಸಹೋದರರು ರೀತಿಯಲ್ಲಿ ಕಾಣಬೇಕು ಎಂದರು.

ಕ್ರಿಸ್‍ಮಸ್, ಮಾನವೀಯತೆಯ ಸಂದೇಶ ಸಾರುವ ಮತ್ತು ಏಕತೆ-ಸಮಾನತೆಯ ಹಬ್ಬ ಕ್ರಿಸ್ ಮಸ್ ಆಚರಣೆ ಮಾನವ ಕುಲದ ಪ್ರೀತಿ ಮತ್ತು ಸೌಹರ್ದತೆಯ ಕೊಂಡಿಯಾಗಿದೆ ಭಗವಂತನ ದಾರಿಯಲ್ಲೇ ಮಾನವರಂತೆ ಸಾಗೋಣ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಮಾತನಾಡಿ, ಸುಮಾರು 2000 ವರ್ಷಗಳ ಹಿಂದೆಯೇ ಏಸು ಕ್ರಿಸ್ತ ಹೇಳಿದ ಸಂದೇಶಗಳು ಇವತ್ತಿಗೂ ಪ್ರಸ್ತುತವಾಗಿವೆ ಸಮಾಜದಲ್ಲಿ ಆನೇಕ ಜಾತಿ ಧರ್ಮಗಳು ಇದ್ದರೂ ನಾವು ಎಲ್ಲರೂ ಮನುಷ್ಯರಾಗಿದ್ದೇವೆ ಪ್ರತಿಯೊಬ್ಬರೂ ಆಕಸ್ಮಿಕವಾಗಿ ಒಂದು ಒಂದು ಜಾತಿ ಧರ್ಮದಲ್ಲಿ ಹುಟ್ಟಿರಬಹುದು ಆದರೆ ಕೊನೆಗೆ ನಾವು ಮನುಷ್ಯ ಎಂಬುದನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪದವೀಧರ ಘಟಕದ ರಾಜ್ಯ ಅಧ್ಯಕ್ಷ ನಟರಾಜಗೌಡ ಮಾತನಾಡಿ, ಕ್ರಿಸ್ಮಸ್ ಹಬ್ಬಕ್ಕೆ ಪರಂಪರೆ ಇದೆ ಹಬ್ಬದ ಸಂಭ್ರಮಕ್ಕೆ ಸೀಮಿತವಾಗದೇ ಸೇವಾ ಮನೋಭಾವವನ್ನು ಕಾಣಬೇಕಾಗಿದೆ ಸ್ನೇಹ, ವಿಶ್ವಾಸ, ಬರವಸೆ, ನಂಬಿಕೆ ಏಸು ಕ್ರಿಸ್ತನ ಮೂಲ ಉದ್ದೇಶವಾಗಿದೆ ಒಂದಾಗಿ ಹೋಗುವ ಪ್ರವೃತ್ತಿ ಈಹಬ್ಬದಿಂದ ನಾವು‌ ಕಲೆಯಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ಗುರುಗಳಿಂದ ಸೌಹಾರ್ದ ಸಂದೇಶಗಳನ್ನು ನೀಡಿದರು, ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಹಿರಿಯ ಪತ್ರಕರ್ತ ಕೆ.ಎಸ್ ಗಣೇಶ್, ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಹಾಗೂ ಕ್ರೈಸ್ತ ಯುವ ಮುಖಂಡ ಟಿ.ಎಸ್ ಸುಧೀರ್, ನಗರಸಭೆ ಸದಸ್ಯ ಮುರಳಿಗೌಡ, ಮಾಜಿ ಸದಸ್ಯರಾದ ಸೋಮಶೇಖರ್, ಸಲ್ಲಾವುದ್ದೀನ್ ಬಾಬು ಮುಖಂಡರಾದ ದಲಿತ ನಾರಾಯಣಸ್ವಾಮಿ, ರತ್ನಮ್ಮ, ಕಿಟ್ಟಣ್ಣ, ಕುರುಬಪೇಟೆ ವೆಂಕಟೇಶ್, ಚೇತನ್ ಬಾಬು, ಮನ್ಸೂರ್, ನವೀನ್ ಗೌಡ ಮುಂತಾದವರು ಇದ್ದರು.

Leave a Reply

Your email address will not be published. Required fields are marked *