ಕೋಲಾರ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ಶ್ರೇಷ್ಠ ಆದೇಶ ನೀಡಿದ್ದರೂ ರಾಜ್ಯ ಸರಕಾರವು ಕಾಲಹರಣ ಮಾಡು ತ್ತಿದ್ದು, ಒಂದು ತಿಂಗಳ ಒಳಗಾಗಿ ವರ್ಗೀಕರಣ ಜಾರಿ ಮಾಡದಿದ್ದರೆ ಸಿಎಂ ಸಿದ್ದರಾಮಯ್ಯರ ವರುಣ ಕ್ಷೇತ್ರದಲ್ಲಿನ ಮನೆಗೆ ಮುತ್ತಿಗೆ ಹಾಕಿ ಅಲ್ಲಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ವಿಚಾರವಾಗಿ ಮಂದ ಕೃಷ್ಣ ಮಾದಿಗ ಅವರ ನೇತೃತ್ವ ದಲ್ಲಿ 30 ವರ್ಷ ಸುದೀರ್ಘ ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ.
ಹಲವು ವರದಿಗಳನ್ನು ಪರಿ ಶೀಲಿಸಿದ ಬಳಿಕ ಇದೀಗ ಸುಪ್ರೀಂ ಆಗಸ್ಟ್ 1 ರಂದೇ ಆದೇಶ ನೀಡಿದೆ. ಆದರೆ ಮೊದಲಿಂದಲೂ ಅಹಿಂದ, ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಂಡು ಬಂದಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರಕಾರವು ಜಾರಿ ತಡ ಮಾಡುವ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿಕೊಂಡು ಬರುತ್ತಿದ್ದು, ಲಕ್ಷಾಂತರ ಮಂದಿ ಸೇರಿ ಮುತ್ತಿಗೆ ಹಾಕಿ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಈಗಾಗಲೇ ಹೋರಾಟಕ್ಕೆ ಸಜ್ಜಾಗುತ್ತಿರುವುದಾಗಿ ಹೇಳಿದರು.
ಸದಾಶಿವ ಆಯೋಗದ ವರದಿ, ಕಾಂತರಾಜು ವರದಿ ಏನಾಗಿದೆ. ಅವು ಸ್ಪಷ್ಟವಾಗಿದ್ದರೂ ಮತ್ತೊಮ್ಮೆ ವರದಿಯನ್ನು ಕೇಳುತ್ತಿರುವುದಕ್ಕೆ ಕಾರಣವಾದರೂ ಏನು ಪ್ರತಿಬಾರಿಯೂ ಅನೇಕ ಜಾತಿಗಳನ್ನು ತಂದು ಸೇರಿಸ ಲಾಗುತ್ತಿದೆ ಹೊರತು ಜಾರಿ ಮಾಡುತ್ತಿಲ್ಲ. ಇದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ವಿಚಾರ ಗೊತ್ತಿದ್ದರೂ ಬಾಯಿಗೆ ಬಂದಂತೆ ಮಾತನಾಡಿರುವ ಎಚ್.ಕೆ.ಪಾಟೀಲ್ಗೆ ಬುದ್ದಿ ಭ್ರಮಣೆಯಾಗಿದೆ ಎಂದು ಕಿಡಿಕಾರಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ನಮ್ಮ ಜನಾಂಗಕ್ಕೆ ಮಹಾನ್ ಅನ್ಯಾಯ ಮಾಡಿರುವ ಏಕೈಕ ಸರಕಾರ ಇದಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಜಸ್ಟೀಸ್ ಜನಾರ್ದನ್ ವರದಿ ಪ್ರಕಾರ ಒಳ ಮೀಸಲಾತಿ ಜಾರಿಯಾಗಿದೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬುನಾಯ್ಡು ಈ ಹಿಂದೆ ಸಿಎಂ ಆಗಿದ್ದಾಗ ಮಾಡಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ಜಾರಿಗೆ ಸಿದ್ದಗೊಳಿಸ ಲಾಗುತ್ತಿದೆ. ಆದರೆ ನಮ್ಮ ರಾಜ್ಯದ ಸರಕಾರಕ್ಕೆ ಇನ್ನೆಷ್ಟು ವರದಿಗಳು ಬೇಕು ಸಬೂಬು ಹೇಳಿಕೊಂಡೇ ಕಾಲಹರಣ ಮಾಡುತ್ತಿದ್ದಾರೆ.
ಸಮುದಾಯದ ಶಾಸಕ, ಸಚಿವರು ಮನವಿ ಮಾಡಿದರೂ ಸರಕಾರ ಸ್ಪಂದಿಸದೇ ಇರುವುದು ಸರಿಯಲ್ಲ ಎಂದು ಖಂಡಿಸಿ, ವರುಣದಲ್ಲಿ ಸಿಎಂ ಮನೆಗೆ ಮುತ್ತಿಗೆ, ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದರು. ಅಲ್ಲದೆ ದಲಿತ ಸಿಎಂ ವಿಚಾರ ಬಂದಾಗ ನಮ್ಮ ಸಮುದಾಯದವರಿಗೆ ಅವಕಾಶ ಕಲ್ಪಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೌವರವಾಧ್ಯಕ್ಷ ರವಿಕುಮಾರ್, ಜಿಲ್ಲಾಧ್ಯಕ್ಷ ಆಲೇರಿ ಮುನಿರಾಜು, ಉಪಾಧ್ಯಕ್ಷ ಮಾಕೊರ್ಂಡಪ್ಪ, ಮುಖಂಡರಾದ ಆಂಜಿನಪ್ಪ, ದೇವರಾಜ್, ರಾಜೇಶ್, ಮಂಜು ನಾಥ್, ಸತೀಶ್ ಮುಂತಾದವರಿದ್ದರು.