ಕೋಲಾರ: ನಗರದ ನಚಿಕೇತನ ನಿಲಯದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೇತೃತ್ವದಲ್ಲಿ ಬಾಬಾಸಾಹೇಬ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕ್ಯಾಂಡಲ್ ಮೂಲಕ ಗೌರವ ಸಲ್ಲಿಸಿ ಚೈತ್ಯ ಭೂಮಿ ಚಲೋಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ರಾಜ್ಯ ಅಧ್ಯಕ್ಷ ಬೆಳತೂರು ವೆಂಕಟೇಶ್ ಮಾತನಾಡಿ ಅಂಬೇಡ್ಕರ್ ಅವರ ಆಶಯಗಳನ್ನು ನೆರವೇರಿಸಬೇಕಾಗಿರುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಅವರ ಪರಿನಿರ್ವಾಣ ದಿನದ ಅಂಗವಾಗಿ ಕೋರೆಗಾಂವ್ ಚಲೋ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ಬಾರಿ ಹಮ್ಮಿಕೊಳ್ಳಲಾಗಿದೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು
ಆಧುನಿಕ ಭಾರತದ ಪಿತಾಮಹ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿ ದಲಿತ ಸಮುದಾಯದ ಏಳಿಗೆಗಾಗಿ, ಸಮಾನತೆಗಾಗಿ ನಡೆಸಿದ ಚಿಂತನೆಗಳು, ಹೋರಾಟಗಳು ಚಿರಸ್ಮರಣೀಯವಾಗಿವೆ. ಅವರು ನಡೆದು ಬಂದ ಕಷ್ಟದ ದಾರಿಯಲ್ಲಿ ಇಡೀ ಭಾರತವೇ ಗುರುತಿಸುವ ವ್ಯಕ್ತಿಯಾಗಿ ಸಮಾಜದ ಹಿಂದುಳಿದವರ ದೀನ ದಲಿತರ ಸಮಗ್ರ ಅಭಿವೃದ್ಧಿಗೆ ಅವರು ಹಾಕಿ ಕೊಟ್ಟಿರುವ ಭದ್ರ ಬುನಾದಿಯ ಪರಿಣಾಮ ಇಂದು ದಲಿತರು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ಮಾತನಾಡಿ ನ.೨೧ ರಿಂದ ಡಿ4 ರವರೆಗೆ ರಾಜ್ಯಾದ್ಯಂತ ಸಂಘಟನೆಯ ನೇತೃತ್ವದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ವಚ್ಚಗೊಳಿಸಿ ಮುಂಬೈಯ ಚೈತ್ಯ ಭೂಮಿಗೆ ಚಲೋ ಹಮ್ಮಿಕೊಳ್ಳಲಾಗಿದೆ ಅಂಬೇಡ್ಕರ್ ಅವರ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ವಿಶ್ವದ ಬಹಳ ವಿಸ್ತಾರವಾದ ಅತಿ ದೊಡ್ಡ ಸಂವಿಧಾನ ರಚಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರದಾಗಿದೆ ಅವರ ಆದರ್ಶ ಆಶಯ, ಸಿದ್ಧಾಂತಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಅಮರೇಶ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಂಟು ಆಟ್ಸ್ ರಾಮಚಂದ್ರ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಪಿವಿಸಿ ಮಣಿ, ಶಕುಂತಲಾ, ಮಂಜುಳಾ, ವರ್ತೂರು ನಾಗರಾಜ್, ತಿಪ್ಪಯ್ಯ ಮುಂತಾದವರು ಇದ್ದರು.