ಕೋಲಾರ: ನವೆಂಬರ್ 10 ರಂದು ವೇಮಗಲ್ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದೇ ದಿನ ಸಂಜೆ ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗುವುದು ಎಂದು ಚಿತ್ರದ ನಿರ್ಮಾಪಕ ಹಾಗೂ ಮಾಜಿ ಜಿ.ಪಂ ಅಧ್ಯಕ್ಷ ಸಿ.ಎಸ್ ವೆಂಕಟೇಶ್ ಹೇಳಿದರು.
ವೇಮಗಲ್ ಪಟ್ಟಣದ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸಾಂಸ್ಕೃತಿ ರಸದೌತಣ ನೀಡುವ ಸಲುವಾಗಿ ಪ್ರತಿ ವರ್ಷದಂತೆ ಈ ಬಾರಿಯು ವೇಮಗಲ್ ಪಟ್ಟಣದಲ್ಲಿ ಅದ್ದೂರಿಯಾಗಿ 8ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿದೆ. ನ.10ರಂದು ಮೈಸೂರು ದಸರಾ ಆಚರಣೆ ರೀತಿಯಲ್ಲಿ ವೇಮಗಲ್ ಪಟ್ಟಣದಾದ್ಯಂತ ದೀಪಾಲಂಕಾರಿಂದ ಅಲಂಕರಿಸಿ ಗ್ರಾಮೀಣ ಭಾಗದ ಜನರಿಗೆ ಸಾಂಸ್ಕೃತಿಕ ರಸದೌತಣ ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಈ ಭಾಗದ ಎಲ್ಲಾ ಸಂಘಟನೆಗಳ ಸಹಕಾರ ಹಾಗೂ ಮುಖಂಡರ ಸಹಕಾರದಿಂದ ಆಚರಿಸಲಾಗುತ್ತಿರುವ 8ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸುಮಾರು 15 ರಿಂದ 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ನ.10ರಂದು ಬೆಳಗ್ಗೆ 9 ಗಂಟೆಗೆ ಬಸ್ ನಿಲ್ದಾಣದಲ್ಲಿ ಧ್ವಜಾರೋಹಣ, 9.30ಕ್ಕೆ ಭುವನೇಶ್ವರಿ ಪಲ್ಲಕ್ಕಿ ಪೂಜೆ ಮತ್ತು ಪ್ರಸಾದ ವಿನಿಯೋಗ ಹಾಗೂ ಅತಿಥಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 10 ಗಂಟೆಗೆ ವಿಶೇಷವಾಗಿ ಅಲಂಕೃತಗೊಳಿಸಲಾಗುವ ಆಟೋಗಳಿಗೆ ಹಾಗೂ ಆಟೋ ನಿಲ್ದಾಣದಲ್ಲಿ ಪೂಜೆ ನೆರವೇರಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಕಲಾ ತಂಡಗಳಿಂದ ಮತ್ತು ಆಟೋಗಳಿಂದ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಸಂಜೆ 6 ಗಂಟೆಗೆ ವೇಮಗಲ್ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಲವು ಸಿನಿ ತಾರೆಯರಿಂದ ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ ಸಿನಿಮಾದ ಟೀಸರ್ ರಿಲೀಸ್ ಮತ್ತು ಅದ್ದೂರಿಯಾಗಿ ವೇದಿಕೆಯ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಡವರ ಮಕ್ಕಳು ಹೇಗೆ ಜೀವನ ನಡೆಸುತ್ತಾರೆ ಎನ್ನುವ ಅಥಗರ್ಭಿತ ಸಿನಿಮಾ ಇದಾಗಿದ್ದು ಕುಟುಂಬ ಸಮೇತ ಕುಳಿತು ನೋಡಬಹುದಾಗಿರುವ ಸಿನಿಮಾ. ಡಾಲಿ ಧನಂಜಯ್ ಅವರು ನೀಡಿರುವ ಟೈಟಲ್ ಹೆಸರಲ್ಲೇ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದರು.
ಮಂಜು ಕವಿ ಡೈರೆಕ್ಟನ್ ನಲ್ಲಿ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ನಾಲ್ಕು ಹಾಡುಗಳನ್ನು ಅರ್ಥಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ. ಯಾವುದೇ ರೀತಿಯ ಪೈಟಿಂಗ್ ಸೀನ್ಸ್ ಈ ಸಿನಿಮಾದಲ್ಲಿ ಇಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗೆ ಸಿನಿಮಾಗಳ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ವೀಕ್ಷಣೆ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಸಿನಿಮಾ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಜೊತೆಗೆ ಜೊತೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಗೌಡರ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವಥಪ್ಪ, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ತಿಗಳ ಜನಾಂಗದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ವಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ನಿರ್ದೇಶಕ ವೆಂಕಟೇಶ್ (ವಿನಯ್) ಕಸ್ತೂರಿ ಬಳಗ ರಾಜಕುಮಾರ್, ಕಾಂತರಾಜ್, ಪೊಲೀಸ್ ಚಲಪತಿ, ಜಮಯಾತ್ ಕಾರ್ಯದರ್ಶಿ ಜಮೀರ್, ದಲಿತ ಮುಖಂಡರಾದ ಶಿವಣ್ಣ, ಮುನಿರಾಜು, ವಿಜಿಕುಮಾರ್, ರವಿ, ಕರ್ನಾಟಕ ಹಿತ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಬಾಬಣ್ಣ, ವಕೀಲರಾದ ನಾಗೇಶ್, ವೆಂಕಟೇಶ್ ಗೌಡ, ಹರಿಣಿ ಮಂಜುನಾಥ್ ಉಪಸ್ಥಿತರಿದ್ದರು.