ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅರಾಭಿಕೊತ್ತನೂರು ಪ್ರೌಢಶಾಲೆ ಮಕ್ಕಳ ಉತ್ತಮ ಸಾಧನೆ

ಕೋಲಾರ: ತಾಲ್ಲೂಕಿನ ವಕ್ಕಲೇರಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದು, ವಿವಿಧ ಕ್ರೀಡೆಗಳಲ್ಲಿ ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗಿದ್ದು, ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮತ್ತು ಶಿಕ್ಷಕರು ಮಕ್ಕಳನ್ನು ಅಭಿನಂದಿಸಿದರು.

ಕ್ರೀಡೆಗಳೂ ಸಹಾ ಪಠ್ಯದಷ್ಟೇ ಮುಖ್ಯವಾಗಿದ್ದು, ಮಕ್ಕಳನ್ನು ತಯಾರು ಮಾಡಿ ಇಷ್ಟೊಂದು ಬಹುಮಾನಗಳನ್ನು ಗಳಿಸಲು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಲೀಲಾ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ವಿಜೇತ ವಿದ್ಯಾರ್ಥಿಗಳೆಂದರೆ 100 ಮೀಟರ್ ಓಟದಲ್ಲಿ ಸಂಜಯ್ ಪ್ರಥಮ,  800 ಮೀಟರ್ ಓಟದಲ್ಲಿ ಪ್ರಜ್ವಲ್ ಪ್ರಥಮ ಸ್ಥಾನ, ಜಿ.ಎಂ.ಮಜುನಾಥ್ ದ್ವಿತೀಯ ಸ್ಥಾನ,  400 ಮೀಟರ್ ರಿಲೇಯಲ್ಲಿ ಸಂಜಯ್, ನಿಖಿಲ್, ಸುಹಾಸ್, ಶಿವು ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಉದ್ದ ಜಿಗಿತದಲ್ಲಿ ನಿಖಿಲ್ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ನಿಖಿಲ್ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ಕೃತಿಕ್ ಕುಮಾರ್ ಪ್ರಥಮ, ಗುಂಡು ಎಸೆತದಲ್ಲಿ ಸಂಜಯ್ ಪ್ರಥಮ ಸ್ಥಾನ, ಚಕ್ರ ಎಸೆತದಲ್ಲಿ ಸಂಜಯ್ ದ್ವಿತೀಯ, ಭರ್ಜಿ ಎಸೆತದಲ್ಲಿ ಸಿ.ಭಾನುಚಂದರ್ ಪ್ರಥಮ, 110 ಮೀಟರ್ ಹರ್ಡಲ್ಸ್ನಲ್ಲಿ ಭಾನುಚಂದರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದ 200 ಮೀಟರ್ ಓಟದಲ್ಲಿ ಟಿ.ನವೀನ ದ್ವಿತೀಯ ಸ್ಥಾನ, ಭರ್ಜಿ ಎಸೆತದಲ್ಲಿ ಮೌನಿಕ ತೃತೀಯ ಸ್ಥಾನ ಪಡೆದುಕೊಂಡಿದ್ದು, ಖೋಖೋದಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು, ತಾಲ್ಲೂಕು ಮಟ್ಟಕ್ಕೂ ಮುನ್ನ ನಿರಂತರ ಅಭ್ಯಾಸ ಮಾಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಆರ್.ವೆಂಕಟರೆಡ್ಡಿ, ಶ್ವೇತಾ, ಲೀಲಾ, ಫರೀದಾ, ರಮಾದೇವಿ, ಚಂದ್ರಶೇಖರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *