ಕೋಲಾರ: ನಗರದ ಪತ್ರಕರ್ತರ ಭವನದಲ್ಲಿ ನಡೆದ ಹೀ ಅಂಡ್ ಶೀ ಹೇರ್ ಅಂಡ್ ಬ್ಯೂಟಿ ಅವಾರ್ಡ್ಸ್ ಸಮಾರಂಭದಲ್ಲಿ ನಟಿ ಶರಣ್ಯ ಶೆಟ್ಟಿ ಅವರು 50 ಮಂದಿಗೆ ಹೇರ್ ಅಂಡ್ ಬ್ಯೂಟಿ ಅವಾರ್ಡ್ಸ್ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಂಡಲ್ ವುಡ್ ನಟಿ ಶರಣ್ಯ ಶೆಟ್ಟಿ, 6 ತಿಂಗಳ ಡಿಪ್ಲಮೋ ಇನ್ ಹೇರ್ ಡ್ರೆಸಸ್ ಬ್ಯೂಟಿಷಿಯನ್ ಪ್ರಫೇಷನಲ್ ಮೇಕ್‌ಅಪ್ ಹೇರ್‌ಸ್ಟೈಲ್ ಟ್ಯಾಟೋ ಲೇಸರ್ ಟ್ರೀಟಮೆಂಟ್ ಕಾಸ್ಮಾಲಜಿ ಪಡೆದುಕೊಂಡಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತಿದ್ದು ಕಳೆದ 15 ವರ್ಷದಿಂದ 15 ಮಂದಿ ಸಿಬ್ಬಂದಿಯೊಂದಿಗೆ ಪುರುಷರು ಮತ್ತು ಮಹಿಳೆಯರಿಗೆ ಸೆಲೂನ್ ಸೇವೆ ನೀಡುತ್ತಿರುವ ಮುರಳಿ ಅವರು ತರಬೇತಿ ಮೂಲಕ ಯುವಜನರ ಸ್ವಯಂ ಉದ್ಯೋಗಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆಂದು ಶ್ಲಾಘಿಸಿದರು.
ಆಯೋಜಕರಾದ ಮುರಳಿ ಮಾತನಾಡಿ, ಯುವಜನರನ್ನು ಆರ್ಥಿಕ ಸ್ವಾವಲಂಭಿ ಮಾಡುವುದು ಸಂಸ್ಥೆಯ ಗುರಿಯಾಗಿದೆ. ತರಬೇತಿ ನಂತರ ಬ್ಯಾಂಕ್ ಸಾಲ, ಇಂಟೇರಿಯರ್ ಡೆಕೋರೇಷನ್, ಪೀಠೋಪಕರಣಗಳ ಆಯ್ಕೆ ಮುಂತಾದ ಎಲ್ಲ ಕೆಲಸಗಳಲ್ಲಿ ಭಾಗಿ ಆಗುವ ಮೂಲಕ ನೈತಿಕ ಬೆಂಬಲ ನೀಡಲಿದೆ. ಮುಂದಿನ ದಿನಗಳಲ್ಲಿ ಜನರಿಗೆ ಮತ್ತಷ್ಟು ಸೇವೆ ಸಲ್ಲಿಸುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಂಬರೀಶ್, ಮುಖಂಡರಾದ ಎಸ್.ಆರ್.ಜಯೀದ್‌ಪಾಷ, ಮನೀಶ್ ಶೆಟ್ಟಿ, ಶಿಲ್ಪಾ, ಸಂತೋಷ್ ಕುಮಾರ್, ಬಟರ್ ಮಿಲ್ಕ್ ಮಿನಿ ಇದ್ದರು.