ನಾಳೆ ಸಂಜೆ 6 ಗಂಟೆಗೆ ನಟ ಡಾಲಿ ಧನಂಜಯ್ ರಿಂದ “ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ” ಚಿತ್ರದ ಟೀಸರ್ ಬಿಡುಗಡೆ

ಕೋಲಾರ/ವೇಮಗಲ್: ಪಟ್ಟಣದ ವೇಮಗಲ್ ನಲ್ಲಿ 8ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಚಲನಚಿತ್ರ “ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ” ಟೀಸರ್ ಬಿಡುಗಡೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ.‌ ರಾಜ್ಯೋತ್ಸವ ಪ್ರಯುಕ್ತ ವೇಮಗಲ್ ನಲ್ಲಿ ಒಂದು ವಾರಗಳಿಂದಲೇ ಸಕಲ ಸಿದ್ದತೆಗಳು ನಡೆಯುತ್ತಿದ್ದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ದ್ವಜ,ದೀಪಾಲಂಕಾರಗಳಿಂದ ಶೃಂಗಾರಗೊಂಡು ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಸಂಸದ ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ ಅನಿಲ್ ಕುಮಾರ್, ಮಾಜಿ ಸಚಿವ ವರ್ತೂರ್ ಪ್ರಕಾಶ್, ಸಿಎಂಆರ್ ಶ್ರೀನಾಥ್, ಬೆಗ್ಲಿ ಸೂರ್ಯ ಪ್ರಕಾಶ್, ಸಮಾಜ ಸೇವಕ ಲಕ್ಷ್ಮಣ್ ಗೌಡ, ಕುರ್ಕಿ ರಾಜೇಶ್ವರಿ, ಬಂಕ್ ಮಂಜುನಾಥ್, ಅರುಣ್ ಪ್ರಸಾದ್, ಓಂ ಶಕ್ತಿ ಚಲಪತಿ ಆಗಮಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ರಾಮಶೆಟ್ಟಿ ಬಯಲು ರಂಗಮಂದಿರ ಬಳಿ ಧ್ವಜರೋಹಣ, 9-30 ಕ್ಕೆ ಜೈ ಭುವನೇಶ್ವರಿ ದೇವಿ ಪೂಜೆ ಮತ್ತು ಪ್ರಸಾಧ ವಿನಿಯೋಗ, 10 ಗಂಟೆಗೆ ಆಟೋ ಮತ್ತು ಕಾರು ನಿಲ್ದಾಣದಲ್ಲಿ ವಿಶೇಷ ರೀತಿಯಲ್ಲಿ ಶೃಂಗಾರಗೊಂಡಿರುವ ಆಟೋ ಮತ್ತು ಕಾರುಗಳಿಗೆ ಪೂಜಾ ಕಾರ್ಯಕ್ರಮ ಹಾಗೂ ಕಲಾ ತಂಡಗಳು, ಮತ್ತು ವಾದ್ಯಗೋಷ್ಠಿಗಳ ಮುಖೇನ ಅತಿಥಿಗಳಿಂದ ಚಾಲನೆ ನೀಡಿ ಪಟ್ಟಣದ ರಾಜಾ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.

ಇಡೀ ಜಿಲ್ಲೆಯೇ ತಿರುಗಿ ನೋಡುವಂತಹ ಬೃಹತ್ ವೇದಿಕೆಗೆ ಇದೇ ದಿನ ಸಂಜೆ 6 ಗಂಟೆಗೆ ಸೀತಿ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯಲ್ಲಿ ಶ್ರೀರಾಮ ಪ್ರೋಡಕ್ಷನ್ಸ್‌ನಡಿ “ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ” ಚಿತ್ರೀಕರಣ ಶರವೇಗದಿಂದ ಸಾಗುತ್ತಿರುವ ಚಿತ್ರಕ್ಕೆ “ನಟ ಡಾಲಿ ಧನಂಜಯ್” ರವರು ಟೀಸರ್ ಬಿಡುಗಡೆ ಮಾಡಲಿದ್ದಾರೆ.

ಸಾಗರ್ ತುರುವೇಕೆರೆ ಇವೆಂಟ್ಸ್ ವತಿಯಿಂದ ನಡೆಯುವ ರಸಮಂಜರಿ ಕಾರ್ಯಕ್ರಮಕ್ಕೆ ನಿರ್ಮಾಪಕ ಸಿಎಸ್ ವೆಂಕಟೇಶ್, ನಿರ್ದೇಶಕ ಮಂಜು ಕವಿ, ನಟ ಡಾಲಿ ಧನಂಜಯ್, ಅಧ್ಯಕ್ಷ ಚಲನಚಿತ್ರದ ಶರಣ್, ನಿರೂಪಕಿ ಸ್ಮಿತಗೌಡ, ಸುಚೇಂದ್ರ ಪ್ರಸಾದ್, ಸಂಗೀತಾ, ಮಂಜು ಪಾವಗಡ, ವಿನೋದ್, ಗೊಬ್ಬರಗಾಲ, ಚಂದ್ರಪ್ರಭ, ಡಿಕೆಡಿ ರೋಬೋ ನವೀನ್, ಚಿಲ್ಲರ್ ಮಂಜು, ಮಾನಸ, ಅಂತರಾಷ್ಟ್ರೀಯ ಯೋಗ ಪಟು ಬೃಂದ ಟೆನ್ನಿಸ್ ಕೃಷ್ಣ, ಮೂಗು ಸುರೇಶ್, ಸಿಲ್ಲಿನಲ್ಲಿ ಗೌಡ್ರು, ರೇಖಾ , ಶಿವಾರೆಡ್ಡಿ, ಮಧು, ಕನ್ನಡ ಕೋಗಿಲೆ ರಶ್ಮಿ ಶ್ರೀನಿವಾಸ್, ಮಂಜು, ಅರಕಲಗೂಡು,, ಚೆನ್ನಪ್ಪ ಯಾವುಗಲ್ ರವರು ಆಗಮಿಸಲಿದ್ದಾರೆ.

ಈಗಾಗಲೇ 10 ರಿಂದ 15 ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಹೋಬಳಿ ಮಟ್ಟದಲ್ಲಿ ಹಮ್ಮಿಕೊಂಡಿರುವ ಸಿನಿ ತಾರೆಯರಿಂದ ನಡೆಯುವ ರಸಮಂಜರಿ ಕಾರ್ಯಕ್ರಮಕ್ಕೆ ಈಗಾಗಲೇ ಕನ್ನಡಾಭಿಮಾನಿಗಳು, ಪ್ರೇಕ್ಷಕರು ಈಗಾಗಲೇ ವೇದಿಕೆ ಕಡೆ ಬಂದು ಕುರ್ಚಿಗಳು ಬುಕ್ ಮಾಡಲು ಹೆಸರು ಬರೆದು ಕರ್ಚಿಪ್ ಇಡುವ ದೃಶ್ಯಗಳು ಕಾಣಬಹುದಾಗಿದೆ.‌

ಗ್ರಾಮದ ಪ್ರತಿಯೊಂದು ವೃತ್ತದಲ್ಲಿ ವಿವಿಧ ರೀತಿಯ ದೀಪಾಲಂಕಾರ ಮುಖಾಂತರ ಕಂಗೊಳಿಸುತ್ತಿದೆ. ಗ್ರಾಮದ ಪ್ರತಿಯೊಂದು ಕಂಬ ಕಂಬಗಳಿಗೂ ಕನ್ನಡ ಬಾವುಟಗಳನ್ನು ಕಟ್ಟಿರುವುದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ವೇಮಗಲ್ ಗ್ರಾಮದಲ್ಲಿ ಕನ್ನಡದ ಹಬ್ಬ ತುಂಬಿ ತುಳುಕುತ್ತಿದೆ.‌

ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನಲೆ ವೇಮಗಲ್ ಇನ್ಸ್ ಪೆಕ್ಟರ್ ಮಂಜು ಬಿ.ಪಿ ರವರ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ನಡೆಯುತ್ತಿದೆ. ಪ್ರಮುಖ ಮುಖಂಡರು ವೇದಿಕೆ ಸಕಲ ಸಿದ್ದತೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವೇಮಗಲ್- ಕುರುಗಲ್ ಪಪಂ ಮುಖ್ಯಾಧಿಕಾರಿ, ಪಪಂ ಸಿಬ್ಬಂದಿ, ಪಪಂ ವ್ಯಾಪ್ತಿಯ ಪ್ರಮುಖರು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರು, ಮತ್ತು ಸದಸ್ಯರು, ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳು, ಆಟೋ, ಟೆಂಪೋ, ಕಾರು ಚಾಲಕರು ಮತ್ತು ಮಾಲೀಕರು ಎಲ್ಲಾ ಪ್ರಗತಿಪರ ಸಂಘಟನೆಗಳು, ವೇಮಗಲ್ ನ ಎಲ್ಲಾ ಯುವ ಮುಖಂಡರು, ಎಲ್ಲಾ ಸಮುದಾಯ ಮುಖಂಡರು, ಕನ್ನಡ ಕಲಾಭಿಮಾನಿಗಳು ಸಮಸ್ತ ನಾಗರೀಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ನಿರ್ಮಾಪಕರಾದ ಸಿ.ಎಸ್‌ ವೆಂಕಟೇಶ್ ರವರು ಕನ್ನಡ ರಾಜ್ಯೋತ್ಸವ ಸಮಿತಿ ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *