
ಕೋಲಾರ: ನಗರದ ಶಕ್ತಿ ದೇವತೆ ಕೋಲಾರಮ್ಮ ದೇವಿಯ ನೂತನ ಪ್ರಕಾರೋತ್ಸವ, ಕಂಚಿನ ರಥ, ಉತ್ಸವ ಮೂರ್ತಿಯ ಸಂಕ್ರೋಕ್ಷಣ ಮತ್ತು ಮಹಾ ಚಂಡಿಕಾ ಯಾಗವು ಶುಕ್ರವಾರ ನಡೆದಿದ್ದು ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಸೇರಿದಂತೆ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಕೋಲಾರದ ಶಕ್ತಿ ದೇವತೆಯಾದ ಕೋಲಾರಮ್ಮ ದೇವಿಯು ಜಿಲ್ಲೆಯ ಜನರನ್ನು ರಕ್ಷಣೆ ಮಾಡಿಕೊಂಡು ಬಂದಿದೆ ಕೋಲಾರಮ್ಮ ದೇವಸ್ಥಾನ ಇತಿಹಾಸ ಪ್ರಸಿದ್ಧ ಸ್ಥಾನವನ್ನು ಪಡೆದಿದೆ ಇಂತಹ ದೇವರ ದರ್ಶನ ಮಾಡುವುದು ನಮ್ಮ ಪುಣ್ಯವಾಗಿದೆ ಈ ವರ್ಷವು ಉತ್ತರ ಮಳೆ ಬೆಳೆ ಕೊಟ್ಟು ಜನರಿಗೆ ನೆಮ್ಮದಿಯ ಜೊತೆಗೆ ಒಳ್ಳೆಯ ದಿನಗಳನ್ನು ಕೊಡಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದರು,
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರಸಭಾ ಸದಸ್ಯರಾದ ಅಂಬರೀಶ್, ಮಂಜುನಾಥ್ ನಾಮಿನಿ ಸದಸ್ಯರಾದ ಅಮರನಾಥ್, ಗಂಗಮ್ಮನಪಾಳ್ಯ ರಾಮಯ್ಯ, ಮುಖಂಡರಾದ ಕಠಾರಿಪಾಳ್ಯ ಗಂಗಣ್ಣ, ಬಾಬು, ಕೋಟೆ ಶಿವಣ್ಣ, ಮೈಲಾಂಡಹಳ್ಳಿ ಮುರಳಿ, ವಿಜಯನಗರ ಮಂಜುನಾಥ್, ಬಾಲಗೋವಿಂದ್, ಮಹೇಶ್, ವೀರೇಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ.