
ಕೋಲಾರ: ಕೋಲಾರ ಜಿಲ್ಲೆಯಲ್ಲಿ ಬಹಳಷ್ಟು ದಲಿತ ಯುವಕರು ಬುದ್ದಿವಂತರಾಗಿದ್ದು, ಅವರನ್ನು ಸ್ವಯಂ ಉದ್ಯಮಿಗಳನ್ನಾಗಿಸಲು ದಲಿತ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ರವರ ಆಶ್ರಯದಲ್ಲಿ ದಲಿತ ಉದ್ದಿಮೆದಾರರ ಕೋಲಾರ ಜಿಲ್ಲಾ ಸಮಾವೇಶ ನಡೆಸಲಾಯಿತು ಎಂದು ಕೋ ಆರ್ಡಿನೇಟರ್ ನಾರಾಯಣ ಸ್ವಾಮಿ ತಿಳಿಸಿದರು.
ನಗರ ಹೊರವಲಯದ ಖಾಸಗಿ ಹೋಟಲ್ ನಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಜಿಲ್ಲಾ ಮಟ್ಟದ ಸಮಾವೇಶದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ದಲಿತ ಸಮುದಾಯದವರು ಉದ್ದಿಮೆ ಆರಂಭಿಸಲು ಎದುರಾಗುವ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಯಿತು. ಉದ್ದಿಮೆದಾರರಾಗಲು ಬಯಸುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.
ಉದ್ದಿಮೆ ಸ್ಥಾಪಿಸಲು ಯುವಕರಿಗೆ ಆಸಕ್ತಿಯಿದೆ. ಈ ಯುವಕರಿಗೆ ಮಾರ್ಗದರ್ಶನ ನೀಡಬೇಕು. ದಲಿತರ ಏಳಿಗೆಗೆ ಸರ್ಕಾರಗಳು ಸಾಕಷ್ಟು ಯೋಜನೆ ರೂಪಿಸಿವೆ. ಆದರೆ ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ವಹಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದಾಯದ ಯುವಕರು ಉದ್ದಿಮೆ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಆಶಿಸಿದರಲ್ಲದೆ,ಕರ್ನಾಟಕ ಸರ್ಕಾರ ದಲಿತ ಉದ್ಯಮಿಗಳಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡಿದ್ದು,
ಉದ್ಯಮ ಸ್ಥಾಪಿಸಿಲು ಅಗತ್ಯವಾದ ಭೂಮಿಯನ್ನು ಶೇ 25 ರಷ್ಟು ದರದಲ್ಲಿ ನೀಡುತ್ತಿರುವುದಲ್ಲದೆ. ಸಬ್ಸಿಡಿಗಳನ್ನು ನೀಡುತ್ತಿರುವುದರಿಂದ ದಲಿತ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳನ್ನು ಸ್ಥಾಪಿಸ ಬೇಕೆಂದು ಕೋರಿದರು. ಜಿಲ್ಲೆಯಲ್ಲಿ ಪ್ರಸ್ತುತ 25 ಜನ ದಲಿತ
ಉದ್ಯಮಿದಾರರು ಇದ್ದು,ಭೂಮಿ ಹಂಚಿಕೆ ಆಗಿರುವ ಭೂಮಿಗಳ ನೊಂದಣಿ ಹಂತದಲ್ಲಿವೆ. ಭೂಮಿ ದೊರೆತ ನಂತರ ಹಲವು ರೀತಿಯ ಉದ್ಯಮಗಳು ಪ್ರಾರಂಭವಾಗಲಿದ್ದು,ಇನ್ನೂ ಹೆಚ್ಚಿನ ರೀತಿಯಲ್ಲಿ ದಲಿತ ಉದ್ಯಮಿಗಳು ಬೆಳಯಲಿ ಎಂದು ಆಶಿಸಿದರು.
ಉದ್ಯಮಿ ಮಾರ್ಜೇನಹಳ್ಳಿ ಬಾಬು ಮಾತನಾಡಿ
ದಲಿತರಿಗೆ ಹಂಚಿಕೆ ಮಾಡಬೇಕಾದ ಭೂಮಿ ಹಂಚಿಕೆಯಲ್ಲಿ ಅಧಿಕಾರಗಳು ಮೋಸ ಮಾಡಿದ್ದು,ಸಮರ್ಪಕವಾಗಿ ಹಂಚಿಕೆ ಆಗಿಲ್ಲ. ನಿವೇಶನಗಳಿಗೆ ಅರ್ಜಿ ಹಾಕದ ಕಾರಣ ಒಂದಾದರೆ ಮೀಸಲಾತಿ ನೀಡುವಲ್ಲಿ ತಾರತಮ್ಯ ತೋರಿ ಬೇರೆವರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ದಲಿತರಿಗೆ ಮೀಸಲು ಇಟ್ಟಿರುವ ಉಳಿಕೆ ಜಾಗ ಹಂಚಿಕೆ ಮಾಡಲು ಆದೇಶ ಆಗಿದ್ದು,ಜಿಲ್ಲೆಯ ದಲಿತ ಯುವಕರು ನಿರುದ್ಯೋಗಿಗಳಾಗಿದ್ದು, ಉದ್ಯಮಗಳನ್ನು ಪ್ರಾರಂಭ ಮಾಡುವ ಮೂಲಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಆರ್ಥಿಕವಾಗಿ ಸಭಲರಾದಗ ಮಾತ್ರ ನಮಗೂ ಸಮಾನತೆ ಸಿಗಲಿದೆಯೆಂದರು.
ಉದ್ಯಮಿ ಚನ್ನಕೃಷ್ಣಪ್ಪ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಸಮಾವೇಶಗಳು ನಡೆಯಬೇಕು,ರಾಜ್ಯದ ಜಿಲ್ಲೆಗಳಲ್ಲಿ ದಲಿತರಿಗೆ ಸಿಗಬೇಕಾಗಿದ ಭೂಮಿ ಹಂಚಿಕೆಯಲ್ಲಿ ಮೋಸ ಆಗಿದ್ದು,ಅರ್ಹ ದಲಿತ ಉದ್ಯಮಿಗಳಿಗೆ ಭೂಮಿ
ಸಿಗುವಂತೆ ಸರ್ಕಾರ ಕ್ರಮ ಜರಗಿಸ ಬೇಕೆಂದು ಆಗ್ರಹಿಸಿದರು.
ಸಮಾವೇಶದಲ್ಲಿ ಉದ್ಯಮಿ ನಾಗೇಶ್ ಸೇರಿದಂತೆ
ಹಲವಾರು ಉದ್ಯಮಿಗಳು ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿದ್ದರು.