ಕೋಲಾರ: ನಗರಸಭೆಯ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಫೈರೋಜ್ ಖಾನ್ ಅವರು ಸೋಮವಾರ ನಗರಸಭೆ ಆವರಣದ ತಮ್ಮ ಕಛೇರಿಯಲ್ಲಿ ಸೋಮವಾರ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫೈರೋಜ್ ಖಾನ್ ಕೋಲಾರ ನಗರಸಭೆ ವ್ಯಪ್ತೆ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಅಧಿಕಾರಿಗಳು ನಗರಸಭೆಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು. ವೃದ್ಧರು, ಅಂಗವಿಕಲರು ಬಂದಾಗ ಹೆಚ್ಚಿನ ಕಾಳಜಿ ವಹಿಸಬೇಕು. ಸಾರ್ವಜನಿಕರು ನಗರಸಭೆ ಸಂದಾಯ ಮಾಡುವ ಎಲ್ಲಾ ರೀತಿಯ ತೆರಿಗೆ ಹಣವನ್ನು ಬಾಕಿ ಇಟ್ಟುಕೊಳ್ಳದೇ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಪೌರಾಯುಕ್ತ ಪ್ರಸಾದ್, ಹಿರಿಯ ದಲಿತ ಮುಖಂಡ ಸಿ.ಎಂ ಮುನಿಯಪ್ಪ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಸುರೇಶ್ ಬಾಬು, ಅಫ್ಸರ್, ಷಾಮೀರ್, ಏಜಾಜ್, ಮಂಜುನಾಥ್ , ಕೋಮುಲ್ ನಿರ್ದೇಶಕ ಷಂಷೀರ್, ಮುಖಂಡರು, ಅಧಿಕಾರಿಗಳು ಸಿಬ್ಬಂದಿ ಇದ್ದರು.