ಕೋಲಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಕೋಲಾರದ ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಂಘಕ್ಕೆ ಲಭಿಸಿದ ಕಾರಣ ಸಂಘದ ಜಿಲ್ಲಾಧ್ಯಕ್ಷ ಎನ್.ಮುನಿರಾಜು ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಕುರುಬ ಸಮುದಾಯ ಹಿರಿಯ ಮತ್ತು ಕಿರಿಯ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಮಕ್ಕಳು ಈ ದೇಶದ ಭವಿಷ್ಯ ಮತ್ತು ಆಸ್ತಿ ಎಂದು ಮಾಜಿ ಪ್ರಧಾನಿ ಜವಹಾರಲಾಲ ನೆಹರು ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣ ಪ್ರಗತಿಗೆ ನಿಮ್ಮ ಸಂಘದಡಿ ಒತ್ತು ನೀಡಿ. ನಿಮ್ಮ ಸೇವೆಯನ್ನು ಬೇರೆ ಸಂಘದವರು ಸಹ ಅಳವಡಿಸಿಕೊಂಡು ಸಮಾಜ ಸೇವೆ ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಂಘದ ಜಿಲ್ಲಾಧ್ಯಕ್ಷ ಎನ್.ಮುನಿರಾಜು, ಖಜಾಂಚಿ ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಗ್ಯಾರೆಂಟಿ ಯೋಜನೆಗಳ ಸಮಿತಿಯ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಯುವ ಮುಖಂಡರಾದ ಕಠಾರಿಪಾಳ್ಯ ಗಂಗಣ್ಣ, ಅಮರ್, ಬಾಲು, ಭರತ್ ರಾಯ್, ಮಂಜನಾಥ್, ಗೋವಿಂದ, ಕೋಲಾರ ನ್ಯೂಸ್ ಚಂದ್ರು ಹಾಗೂ ಸಂಘದ ಪದಾಧಿಕಾರಿಗಳಾದ ಕೆಎಸ್‌ಆರ್‌ಟಿಸಿ ಮುನಿಯಪ್ಪ, ಪಿ.ನಾರಾಯಣಪ್ಪ, ಕೆ.ಎಮ್.ನಾಗರಾಜು, ಎನ್.ಗೋವಿಂದಪ್ಪ, ಬಿ.ಎಂ.ರಮೇಶ್ ಬಾಬು, ಕೆ.ಎಂ.ಅನಿಲ್ ಗಾಂಧಿ, ಆರ್.ರಾಜಣ್ಣ, ಕೆ.ವೆಂಕಟರಾಮಪ್ಪ, ಬಿ.ಎನ್.ಮುನಿರಾಜಪ್ಪ, ಡಿ.ಶಿವಕುಮಾರ್, ಕೆ.ಸಿ.ನಾರಾಯಣಸ್ವಾಮಿ, ಕೆ.ಎನ್.ಚಂದ್ರಶೇಖರ್, ಕೋರ್ಟ್ ಮುನಿರಾಜು, ಹರ್ಷಿತ್, ಭರತ್ ರಾಜ್, ವರುಣ್ ಕುಮಾರ್, ಪ್ರಭಾವತಿ, ಶಾಂತಮ್ಮ, ಕೊಂಡರಾಜನಹಳ್ಳಿ ಮಂಜುಳಾ ಹಾಗೂ ಇತರರು ಹಾಜರಿದ್ದರು.