ಎಡಿಜಿಪಿ ಚಂದ್ರಶೇಖರ್ ರಾಜೀನಾಮೆಗೆ ಜೆಡಿಎಸ್ ಒತ್ತಾಯ

ಕೋಲಾರ: ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಅವಹೇಳನ‌ ಪದ ಬಳಕೆ ಮಾಡಿರುವ ಎಸ್ಐಟಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಜೆಡಿಎಸ್ ವತಿಯಿಂದ ಹೊಸ ಬಸ್ ನಿಲ್ದಾಣ ಬಳಿ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದಲ್ಲಿ ಎಸ್ಐಟಿ ಒಂದು ತನಿಖಾ ಸಂಸ್ಥೆಯಾಗಿ ಉಳಿದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಪ್ರಾಯೋಜಕತ್ವದ ಸಂಸ್ಥೆಯಾಗಿದೆ ಅಧಿಕಾರಿಗಳಿಗೆ ಅವರದೇ ಆದ ನಿಯಮಗಳಿದ್ದರೂ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ತಮ್ಮ ನಿಯಮಗಳನ್ನು ಬದಿಗೊತ್ತಿ ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿದ್ದಾರೆ. ಕೂಡಲೇ ಚಂದ್ರಶೇಖರ್ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ದ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ಎಸ್.ಐ.ಟಿ ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರ ಬಗ್ಗೆ ಬಳಸಿರುವ ವಾಕ್ಯವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಲ್ಲಿ ಬಹುತೇಕ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ, ಅಧಿಕಾರ ಯಾರಿಗೂ ಶಾಶ್ವತವಲ್ಲ ಆದರೆ ಕಾಂಗ್ರೆಸ್‌ ನಾಯಕರು ನೇರವಾಗಿ ಕುಮಾರಸ್ವಾಮಿಯವರ ವಿರುದ್ದ ಮಾತನಾಡದೆ ಜನರ ತೆರಿಗೆ ಹಣದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳಿಂದ ಕುಮಾರಸ್ವಾಮಿಯವರ ವಿರುದ್ದ ಮಾತನಾಡಿಸಿದ್ದಾರೆ ಇದು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು

ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಬನಕನಹಳ್ಳಿ‌ ನಟರಾಜ್ ಮಾತನಾಡಿ ಎಡಿಜಿಪಿ ಚಂದ್ರಶೇಖರ್ ಆಂದ್ರಪ್ರದೇಶದ ಮೂಲದ ವ್ಯಕ್ತಿಯಾಗಿದ್ದು ಅವರ ಅಧಿಕಾರ ಅವಧಿಯಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರ ಮಾಡಿದ್ದು ಅವರ ಇಲಾಖೆಯ ಅಧಿಕಾರಿಗಳ ಆತನ ವಿರುದ್ದ ದೂರು ನೀಡಿ ಕಾನೂನು ಹೋರಾಟ ಮಾಡಿದ್ದಾರೆ ಅಂತಹ ಭ್ರಷ್ಟ ಅಧಿಕಾರಿಯಿಂದ ಕಾಂಗ್ರೆಸ್ ನಾಯಕರು ಮಾತನಾಡಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಕಾಂಗ್ರೆಸ್ ನವರೇ ಎದುರಿಸಬೇಕಾಗುತ್ತದೆ ಎಂದರು

ಪ್ರತಿಭಟನೆಯಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಡಿ.ಕೆ ರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಕಡಗಟ್ಟೂರು ದಯಾನಂದ್, ಎಪಿಎಂಸಿ ಪುಟ್ಟರಾಜು, ದಿಂಬ ನಾಗರಾಜಗೌಡ, ಕಲಾ ರಮೇಶ್, ಜಯನಗರ ಕಾರ್ತಿಕ್, ವಿಜಿಗೌಡ, ಯಲುವಗುಳಿ ನಾಗರಾಜ್ ಛತ್ರಕೋಡಿಹಳ್ಳಿ ಕುಮಾರ್, ಅಮ್ಮೇರಹಳ್ಳಿ ಸತೀಶ್, ಅಮ್ಮನಲ್ಲೂರು ರಮೇಶ್, ನುಕ್ಕನಹಳ್ಳಿ ರಘು, ಚಿಕ್ಕಹಸಾಳ ಲೋಕೇಶ್, ಜಗನ್ನಾಥ, ಶ್ರೀಕಾಂತ್, ಸುಧಾಕರ್, ಜನ್ನಘಟ್ಟ ರವಿ, ಯಡಹಳ್ಳಿ ವೇಣುಗೋಪಾಲ ಮುಂತಾದವರು ಇದ್ದರು

Leave a Reply

Your email address will not be published. Required fields are marked *