ಸಣ್ಣ ಸಮುದಾಯಗಳಿಗೆ ಪೋತ್ಸಾಹ ಅಗತ್ಯ – ಶಾಸಕ ಕೊತ್ತೂರು ಮಂಜುನಾಥ್ 

ಕೋಲಾರ: ಸಮಾಜದಲ್ಲಿ ಸಣ್ಣಪುಟ್ಟ ಸಮುದಾಯಗಳನ್ನು ಪೋತ್ಸಾಹಿಸಿ ಬೆಂಬಲಿಸಿದಾಗ ಮಾತ್ರವೇ ಅ ಸಮುದಾಯಗಳು ಕೂಡ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು

ನಗರದ ಕೆ.ವಿ.ಆರ್.ಸಿ ಸಮುದಾಯ ಭವನದಲ್ಲಿ ಭಾನುವಾರ ನಾಮಧಾರಿ ನಗರ್ತ ಫೌಂಡೇಶನ್ ವತಿಯಿಂದ ಸಮುದಾಯದ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ವಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಸುಮಾರು 71 ಸಣ್ಣಪುಟ್ಟ ಅಲೆಮಾರಿ ಸಮುದಾಯಗಳು ಇದ್ದು ಅವರು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಗುರುತಿಸಿಕೊಳ್ಳಬೇಕಾಗಿದೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಮಾಡುವ ಜವಾಬ್ದಾರಿ ಸಮುದಾಯದ ಮುಖಂಡರ ಮೇಲೆ ಇದೆ ಎಂದರು.

ಸಣ್ಣಪುಟ್ಟ ಸಮುದಾಯಗಳು ಮುಖ್ಯವಾಹಿನಿಗೆ ಬಂದು ಸದೃಢರಾಗಬೇಕಬೇಕಾದರೆ ಮೊದಲು ಶಿಕ್ಷಣ ಮತ್ತು ಉದ್ಯೋಗದಿಂದ ಸಾಧ್ಯ ಸಮುದಾಯದ ನಿರಂತರ ಕಾರ್ಯಕ್ರಮಗಳಿಗೆ ಸಮುದಾಯ ಭವನವನ್ನು ನಿರ್ಮಿಸಲು ಜಾಗವನ್ನು ನೀಡಲಾಗುತ್ತದೆ ಜೊತೆಗೆ ಅನುದಾನವನ್ನು ಕೊಡಲಾಗುತ್ತದೆ ಜೊತೆಗೆ ಮಕ್ಕಳ ಶೈಕ್ಷಣಿಕ ವಿಧ್ಯಾಭ್ಯಾಸಕ್ಕಾಗಿ ಹಾಸ್ಟಲ್ ವ್ಯವಸ್ಥೆ ಮಾಡಲಾಗುತ್ತದೆ ಕೂಡಲೇ ಸರ್ಕಾರದೊಂದಿಗೆ ಪ್ರಸ್ತಾಪನೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಪುಟ್ಟ ಸಮುದಾಯದವರು ಎಂಬ ಮೇಲುಕೀಳು ಇಲ್ಲದೇ ಸಮಾಜದಲ್ಲಿ ಪ್ರಯತ್ನಗಳನ್ನು ಮಾಡಿ ಯಶಸ್ಸು ಗಳಿಸಬೇಕು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ, ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರುವ ಗುರಿಯನ್ನು ಇಟ್ಟುಕೊಳ್ಳಬೇಕು, ಸಣ್ಣಪುಟ್ಟ ಸಮಾಜದಲ್ಲಿ ಮಾತ್ರವೇ ಒಗ್ಗಟ್ಟು ಹೆಚ್ಚಾಗಿದ್ದು ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತಂದು ತಮ್ಮ ಗುರಿಯನ್ನು ಸಾಧಿಸಲು ಪೋತ್ಸಾಹ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಡಿಸಿಪಿ ಡಿ.ದೇವರಾಜ್ ಮಾತನಾಡಿ, ಯಾವುದೇ ಸಮಾಜದಲ್ಲಿ ಆದರೂ ಮಕ್ಕಳನ್ನು ಗುರುತಿಸಿ ವಿದ್ಯಾಭ್ಯಾಸದಲ್ಲಿ ಪೋತ್ಸಾಹಿಸಿದಾಗ ಸಮುದಾಯ ಅಭಿವೃದ್ಧಿ ಹೊಂದುವಂತೆ ಮಾಡಲು ಸಾಧ್ಯ ಮಕ್ಕಳು ಸಾಧನೆ ಮಾಡಿದಾಗ ಗುರುತಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅದೇ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು ಒಂದಿಷ್ಟು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ದಾರಿ ತೋರಿಸಬೇಕು ಎಂದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ನಾಮಧಾರಿ ನಗರ್ತ ಫೌಂಡೇಶನ್ ಅಧ್ಯಕ್ಷ ಜಿ.ಆನಂದಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಗರಸಭೆ ನಿವೃತ್ತ ಪೌರಾಯುಕ್ತ ರಾಮಪ್ರಸಾದ್, ಮುಖಂಡರಾದ ವಿಶ್ವನಾಥ್, ರಾಮಕೃಷ್ಣ, ನಾಗರಾಜಶೆಟ್ಟಿ, ಮಂಜುನಾಥ್ ಮುಳಬಾಗಿಲು ನಗರಸಭೆ ಸದಸ್ಯ ಪ್ರಸಾದ್, ಜಯರಾಮ್, ಸೋಮಶೇಖರ್, ಸರೋಜ ಮುಂತಾದವರು ಇದ್ದರು.

Leave a Reply

Your email address will not be published. Required fields are marked *