ಕೋಲಾರ: ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಜಾನಪದ ಸಂಗೀತಾ ಸುಗ್ಗಿಯನ್ನು ನಗರದ ಸಿ.ಬೈರೇಗೌಡ ನಗರದ ಮೈದಾನದಲ್ಲಿ ಅ.6ರಂದು ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಜಗ್ಗಣ್ಣಕ್ಕ ಜಾನಪದ ಹಾಡುಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂತರಾಷ್ಟ್ರೀಯ ಜಾನಪದ ಗಾಯಕ ಹಾಗೂ ನಿರೂಪಕ ಗೋ.ನಾ ಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸೆ.29ರಂದು ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಡಿಷನ್ (ಆಯ್ಕೆ ಪ್ರಕ್ರಿಯೆ) ನಡೆಯಲಿದೆ. ಉಚಿತ ಪ್ರವೇಶ ವಿದ್ದು ಜಾನಪದ ಗಾಯಕರು ಆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಅಲ್ಲಿ ಯಶಸ್ವಿಯಾದವರನ್ನು ಅ.6ರ ವೇದಿಕೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುವುದು ವಿಶೇಷ ಬಹುಮಾನ ಕೂಡ ಇರಲಿದ್ದು ವೇದಿಕೆ ಕಾರ್ಯಕ್ರಮವು ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾ ಆಸಕ್ತರು ಭಾಗವಹಿಸಬಹುದು ಎಂದರು.
ಜಿಲ್ಲೆಯ ಜಾನಪದವು ನನ್ನ ಮೂಲ ಮಂತ್ರವಾಗಿದೆ ನನ್ನ ತಾಯಿ ಕೂಡ ಹಾಡುತ್ತಿದ್ದ ಜಾನಪದವನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ ಸುಮಾರು 69 ದೇಶಗಳಲ್ಲಿ ಹಾಡಿದ್ದೇನೆ ಇತ್ತಿಚೆಗೆ ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಜಿಲ್ಲೆಯಿಂದ ಭಾಗವಹಿಸಿ ಯಶಸ್ವಿ ಕಾರ್ಯಕ್ರಮವನ್ನು ನೀಡಲಾಗಿದೆ ಜಾನಪದ ಕಲೆಯ ಉಳಿವಿಗಾಗಿ ಸಂಗೀತಾ ಸುಗ್ಗಿಯು ವಿನೂತನ ಜಾನಪದ ಕಾರ್ಯಕ್ರಮವಾಗಿದ್ದು, ಇಂಥ ಕಾರ್ಯಕ್ರಮವನ್ನು ಯಾರೂ ಮಾಡಿಲ್ಲ. ಕೋಲಾರ ನನ್ನೂರು. ಹೀಗಾಗಿ, ಮೊದಲು ಇಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇನೆಎಂದು ಹೇಳಿದರು.
ಕೋಲಾರದ ಕಾರ್ಯಕ್ರಮ ಬಳಿಕ ರಾಜ್ಯದಾದ್ಯಂತ ಸುಮಾರು 152 ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ದೇನೆ 10 ವರ್ಷಗಳ ಯೋಜನೆ ಇದೆ. ಉತ್ತರ ಕರ್ನಾಟಕಕ್ಕೂ ಹೋಗಲಿದ್ದೇನೆ ಜಾನಪದದಿಂದ ಸಿನಿಮಾ ಹುಟ್ಟಿದೆ. ಆದರೆ, ಜಾನಪದದ ಬಗ್ಗೆ ಈಗ ಮೂಗುಮುರಿಯುತ್ತಿದ್ದಾರೆ. ಜಾನಪದ ಮರೆಯುತ್ತಿರುವುದರಿಂದ ಸಂಬಂಧ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದರನ್ನು ಪರಿಚಯಿಸುವ ಹಾಗೂ ಗೌರವಿಸುವ ಕೆಲಸ ಮಾಡೋಣ. ಕಾರ್ಯಕ್ರಮ ಕೊಡಿಸುವ ಕೆಲಸ ಮಾಡೋಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಕೊಡಿಸೋಣ ಎಂದು ನುಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆ ಗೋ.ನಾ ಸ್ವಾಮಿ ದೇಸಿ ಕಲೆಯ ಪ್ರದರ್ಶನ ನಡೆಯುತ್ತಿದೆ. ಈ ಜಾನಪದಲ್ಲಿ ಆಧುನಿಕ ಸಂಗೀತ ಸಂಯೋಜನೆಗೊಂಡಿದೆ. ಅವರು ಜಾನಪದ ಕಲೆ ಉಳಿಸಿ ಬೆಳೆಸಿ ಪ್ರೋತ್ಸಾಹಿಸುತ್ತಿದ್ದಾರೆ. ಜಿಲ್ಲೆ ಮೇಲೆ ವಿಶೇಷ ಕಾಳಜಿ ಹೊಂದಿದ್ದಾರೆ ಇಂಥ ಕಲೆಯನ್ನು ನಾವು ಪ್ರೋತ್ಸಾಹಿಸಬೇಕು. ಹೆಚ್ಚಿನ ಜನ ಸೇರಿ ಕಲಾವಿದರು ಬೆಳೆಯಲು ಸಹಕಾರ ನೀಡಬೇಕು. ಜಗ್ಗಣ್ಣಕ್ಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು,
ಇವತ್ತಿನ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿಬೆಳೆಸಬೇಕು ಶೋಭಾನೆ ಹಾಡುಗಳು, ವೇಮನ ಪದಗಳು, ರಾಗಿ ಬೀಸೋ ಹಾಡು ಸೇರಿದಂತೆ ನೂರಾರು ಕಲಾ ಪ್ರಕಾರಗಳು ಜಿಲ್ಲೆಯಲ್ಲಿವೆ. ಇಂಥ ಹಾಡು ಹಾಡುವ ಕಲಾವಿದರನ್ನು ಹುಡುಕಿ ಪ್ರೋತ್ಸಾಹಿಸಬೇಕು ವಿಡಿಯೋ ಮಾಡಿ ಪರಿಚಯಿಸಬೇಕು ಎಂದರು.
ಹಿರಿಯ ಪತ್ರಕರ್ತ ವಿ.ಮುನಿರಾಜು ಮಾತನಾಡಿ, ಜಗ್ಗಣ್ಣಕ್ಕ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಗೋ.ನಾ ಸ್ವಾಮಿ ಜಾನಪದ ಕಲೆ ಉಳಿಸಿ ಬೆಳೆಸುವ ಇಚ್ಛೆ ಹೊಂದಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಆಡಿಷನ್ ಸಂಬಂಧ ಮಾಹಿತಿ ಹಾಗೂ ಪಾಸ್’ ಪಡೆಯಲು ಸುಧಾಕರ್, ಮೊ: 8050533199 ಹಾಗೂ ಕುಮಾರ್, ಮೊ: 8892209188 ಸಂಪರ್ಕಿಸಬಹುದು ಎಂದು ಗೋ.ನಾ ಸ್ವಾಮಿ ಹೇಳಿದರು ಗೋಷ್ಠಿಯಲ್ಲಿ ಕಲಾವಿದ ಮತ್ತಿಕುಂಟೆ ಕೃಷ್ಣ ಇದ್ದರು