ಕೋಲಾರ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ರಾಸುಗಳಿಗೆ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಲು ನಿರ್ಲಕ್ಷ್ಯ ವಹಿಸುತ್ತಾರೆ ಇದರಿಂದಲೇ ರಾಸುಗಳಿಗೆ ಹೆಚ್ಚಿನ ರೋಗಲು ಹರಡುತ್ತವೆ ಕೂಡಲೇ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಉತ್ಪಾದಕರ ಜವಾಬ್ದಾರಿಯಾಗಬೇಕು ಎಂದು ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್ ತಿಳಿಸಿದರು.
ತಾಲೂಕಿನ ಕೊಂಡರಾಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯನ್ನು ಉದ್ವಾಟಿಸಿ ಮಾತನಾಡಿದ ಅವರು ರಾಸುಗಳಿಗೆ ಹವಾಮಾನದ ವೈಪರೀತ್ಯದಿಂದ ಒಂದಲ್ಲ ಒಂದು ರೋಗಗಳು ಕಾಣಿಸಿಕೊಳ್ಳುತ್ತವೆ ಉತ್ಪಾದಕರಿಗೆ ಹಸು ಸಾಕಾಣಿಕೆ ತುಂಬಾ ಕಷ್ಟವಾಗಿದೆ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿ ಜೊತೆಗೆ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕು ಎಂದರು,
ಸಂಘದ ಅಧ್ಯಕ್ಷ ಹೆಚ್ ನಾಗರಾಜ್ ಮಾತನಾಡಿ ಪ್ರತಿ ವರ್ಷವೂ ನಷ್ಟದಲ್ಲಿ ನಡೆಯುತ್ತಿತ್ತು ಈ ಬಾರಿ 24,393 ರೂ, ಲಾಭ ಗಳಿಸಿದ್ದೇವೆ ಮುಂದೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಧ್ಯತೆ ನೀಡಲಾಗುತ್ತದೆ. ಇದಕ್ಕೆ ಸಮಿತಿಯ ನಿರ್ದೇಶಕರು, ಹಾಲು ಉತ್ಪಾದಕರು, ಮತ್ತು ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಮುಂದೆ ಮಾದರಿ ಡೇರಿಯಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯನಗರ ಮಂಜುನಾಥ್ ಮಾತನಾಡಿ ಗ್ರಾಪಂ ಕೇಂದ್ರದಲ್ಲಿಯೇ ಹಾಲು ಉತ್ಪಾದನೆ ಕಡಿಮೆ ಇದ್ದು
ಹಾಲು ಉತ್ಪಾದಕರನ್ನು ಉತ್ತೇಜಿಸಲು ಸರಕಾರ ಪ್ರೋತ್ಸಾಹಧನ ನೀಡುತ್ತಿದೆ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಗ್ರಾಮ ಪಂಚಾಯತಿ ವತಿಯಿಂದ ಅಗತ್ಯ ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ನೀಡಲು ಸದಾಸಿದ್ದ ಎಂದರು.
ಈ ಸಂದರ್ಭದಲ್ಲಿ ಕೋಮುಲ್ ವಿಸ್ತಾರಣಾಧಿಕಾರಿಗಳಾದ ಎಸ್.ನಾಗಪ್ಪ, ಎ.ಮಂಜುಳ, ಪಿಡಿಒ ಮಂಜುನಾಥ್ ಪ್ರಸಾದ್, ಮಾತನಾಡಿದರು, ಸಭೆಯಲ್ಲಿ ಗ್ರಾಪಂ ಸದಸ್ಯರಾದ ಶ್ರೀನಿವಾಸ ಯಾದವ್, ಸುಬ್ಬರಾಮಪ್ಪ, ಡೇರಿ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ನಿರ್ದೇಶಕರಾದ ಶಂಕರಪ್ಪ, ಎಂ.ನಾರಾಯಣಸ್ವಾಮಿ. ಮುರಳಿಬಾಬು, ನಂದಕುಮಾರ್, ಸಿ.ನಾರಾಯಣಸ್ವಾಮಿ, ವೆಂಕಟಲಕ್ಷ್ಮೀ, ಕಾರ್ಯದರ್ಶಿ ಗಂಗಾಧರ್, ಸಹಾಯಕ ನಾರಾಯಣಪ್ಪ ಮುಖಂಡರಾದ ಕೋರ್ಟ್ ನಾಗಪ್ಪ, ಶ್ರೀಕಾಂತ್ ಯಾದವ್, ಹಾಲು ಉತ್ಪಾದಕರು, ಗ್ರಾಮಸ್ಥರು ಇದ್ದು ಕಾರ್ಯಕ್ರಮವನ್ನು ಕೊಂಡರಾಜನಹಳ್ಳಿ ಮಂಜುಳ ನಿರೂಪಿಸಿದರು,