ಚಿಕ್ಕನಹಳ್ಳಿ ಹಾಲಿನ ಡೇರಿಗೆ 2.33 ಲಕ್ಷ ನಿವ್ವಳ ಲಾಭ

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯು ಗುರುವಾರ ಸಂಘದ ಕಛೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಅಮರೇಶ್ ಮಾತನಾಡಿ, ಸಂಘದ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ಸಹಕಾರದಿಂದ 2023-24ನೇ ಸಾಲಿನಲ್ಲಿ 3.79 ಲಕ್ಷ ಲಾಭಾಂಶ ಬಂದಿದ್ದು ಇದರಲ್ಲಿನ ನಿವ್ವಳ ಲಾಭವು 2.33 ಲಕ್ಷ ಬಂದಿದ್ದು ಈ ವರ್ಷವು ಹಾಲು ಉತ್ಪಾದಕಕರಿಗೆ ಶೇ 2.10% ಬೋನಸ್ ನೀಡಲಾಗುತ್ತದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಟೀಕೆಗಳು ಸಹಜವಾಗಿಯೇ ಇರುತ್ತವೆ. ಟೀಕೆಗಳನ್ನು ಮೆಟ್ಟಿ ಪ್ರಮಾಣಿಕವಾಗಿ ಕೆಲಸ ಮಾಡುವ ಮೂಲಕ ಡೈರಿಯ ಮತ್ತಷ್ಟು ಅಭಿವೃದ್ಧಿಗೆ ಉತ್ಪಾದಕರು, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡೋಣ. ಡೈರಿಗೆ ಉತ್ಪಾದಕರೇ ಶಕ್ತಿಯಾಗಿದ್ದು ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದಿಂದ ಸಿಗುವ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್ ಮಾತನಾಡಿ, ಹಾಲಿನ ಡೇರಿಗಳು ಅಭಿವೃದ್ಧಿಯಾಗಬೇಕಾದರೆ, ಪಕ್ಷಾತೀತವಾಗಿ ಕೆಲಸ ಮಾಡಬೇಕು. ರೈತರು ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಿದಾಗ ಮಾತ್ರ ಡೇರಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಹಸುಗಳ ಹೊಸ ಹೊಸ ರೋಗಗಳು ಬಂದ್ದು ಸಾಕಾಣಿಕೆ ಕಷ್ಟವಾಗಿದ್ದು ಹೆಚ್ಚಿನ ಕಾಳಜಿ ವಹಿಸಿ ಕಾಲಕಾಲಕ್ಕೆ ವಾಕ್ಸಿನ್ ಮಾಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೋಲಾರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್ ರಾಮಾಂಜಿನಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಶ್ರೀನಿವಾಸಪ್ಪ, ಸಿ ನಾಗರಾಜ್, ರಮೇಶ್, ಅಚ್ಚಪ್ಪ, ಸಿ.ಸಿ ಶ್ರೀನಿವಾಸ್‌, ಭಾಗ್ಯಲಕ್ಷ್ಮೀ, ಶಾರದದೇವಿ, ಸೊಣ್ಣಮ್ಮ ವೆಂಕಟಮ್ಮ ವಿಮಲಮ್ಮ, ಕಾರ್ಯದರ್ಶಿ ಆ‌ರ್ ಗೋಪಾಲಪ್ಪ, ಗ್ರಾಮಸ್ಥರಾದ ಸಿ.ಎಸ್ ಅಂಜನಗೌಡ, ವೆಂಕಟರಮಣಪ್ಪ, ಶಿವಕುಮಾರ್ ಸೇರಿದಂತೆ ಹಾಲು ಉತ್ಪಾದಕರು, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *