ಕಲಬುರಗಿ: ಪ್ರಾಣ ಪ್ರತಿಷ್ಟಾಪನೆಗೆ ಸಿದ್ಧಗೊಂಡಿರುವ ಶಿವಲಿಂಗದ ಮೇಲೆ ಕಾಲಿಟ್ಟು ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಪಾದ ಪೂಜೆ ಮಾಡಿಸಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ನಡೆದಿದೆ.
ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಅವರು ಶಿವಲಿಂಗದ ಮೇಲೆ ಕಾಲಿಟ್ಟು ಭಕ್ತರಿಂದ ಪಾದಪೂಜೆ ಮಾಡಿಸಿಕೊಂಡಿದ್ದಾರೆ. ಹಾಲಿನಿಂದ ಸ್ವಾಮೀಜಿಯ ಪಾದಗಳನ್ನು ತೊಳೆದು ಕುಂಕುಮ ಹಚ್ಚಿ ಬಿಲ್ವ ಪತ್ರೆ ಹಾಗೂ ಹೂವಿನಿಂದ ಭಕ್ತರು ಸ್ವಾಮೀಜಿಯ ಪಾದ ಪೂಜೆ ಮಾಡಿದ್ದಾರೆ.
ಈ ಶಿವಲಿಂಗವು ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧಗೊಂಡಿತ್ತು. ಈಗ ಸ್ವಾಮೀಜಿಯು ಶಿವಲಿಂಗದ ಮೇಲೆ ಕಾಲಿಟ್ಟು ಪಾದಪೂಜೆ ಮಾಡಿಸಿಕೊಂಡಿರುವುದರಿಂದ ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇನ್ನು ಶಿವನ ಭಕ್ತರು ಸ್ವಾಮೀಜಿಯ ಪಾದಪೂಜೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿಯು ಸಂಪ್ರದಾಯದಂತೆ ಪಾದ ಪೂಜೆ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: Horoscope 2024: ಸೆಪ್ಟೆಂಬರ್ 10ರ ಮಂಗಳವಾರ ನಿಮ್ಮ ರಾಶಿಗಳ ಫಲಾಫಲ ಹೇಗಿದೆ ನೋಡಿ