ಚಿಕ್ಕಬಳ್ಳಾಪುರ: ಹಲವು ಗ್ರಾಮ ಗಳಿಗೆ ಕುಡಿಯುವ ನೀರಿನ ಮೂಲವಾದ ಕೆರೆಯಂಗಳಕ್ಕೆ ವಿಷಕಾರಿ ವಸ್ತುಗಳನ್ನು ತಂದು ಸುರಿದಿರುವ ಘಟನೆ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದಲ್ಲಿ ನಡೆದಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ತಳಗವಾರ ಕೆರೆಯಾಂಗದಲ್ಲಿ ರಾತ್ರೋರಾತ್ರಿ ವಿಷಕಾರಿ ವಸ್ತುಗಳನ್ನು ತಂದು ಸುರಿದು ಅದರ ಮೇಲೆ ಮಣ್ಣುಮುಚ್ಚಲು ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ಕಂಡು ಅಲ್ಲಿದವರನ್ನು ವಿಚಾರಿಸಿದಾಗ ಮಸ್ತೇನಹಳ್ಳಿಯ ಎಸ್ ಎಲ್ ವಿ ಬ್ಯಾಟರಿ ಕಂಪನಿಯ ತ್ಯಾಜ್ಯವೆಂದು ತಿಳಿಸಿದ್ದು ಗ್ರಾಮಸ್ಥರು ಆಕ್ರೋಶಗೊಂಡು ಕೆರೆಗೆ ಸುರಿದವರನ್ನು ಥಳಿಸಿದ್ದಾರೆ.
ಮೊನೋಲೀತಿಯಂ ಅನಿಲ:
ಇನ್ನು ಮಸ್ತೇನಹಳ್ಳಿಯ ಎಸ್ ಎಲ್ ವಿ ಬ್ಯಾಟರಿ ಕಂಪನಿಯಿಂದ ಹೊರಬರುವ ವಿದ್ಯುತ್ ಶೇಖರಣ ಬ್ಯಾಟರಿಗೆ ಬಳಸುವ ಮೊನೋಲೀತಿಯಂ ಎಂಬ ಅನಿಲವಾಗಿದ್ದು ಇದು ಬಹಳ ಅಪಾಯಕಾರಿಯಾಗಿದೆ. ಇಂತಹ ವಿಷಕಾರಿ ವಸ್ತುಗಳನ್ನು ಕೆರೆಗೆ ಸುರಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ? ರಷ್ಯಾದ ಈ ಯೋಜನೆಗೆ ಭಾರತವು ಕೈಜೋಡಿಸಬಹುದು -ವರದಿ
ಐದಾರು ಊರುಗಳಿಗೆ ನೀರಿನ ಮೂಲ:
ತಳಗವಾರ ಕೆರೆ ಸುತ್ತಮುತ್ತಲಿನ ಕೈವಾರ ಕ್ರಾಸ್, ಮುದ್ದಕದಹಳ್ಳಿ, ತಳಗವಾರ ಸೇರಿ ಐದಾರು ಕೆರೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಮೂಲವಾಗಿದ್ದು, ಇಂತಹ ಕೆರೆಗೆ ವಿಷಕಾರಿ ವಸ್ತುಗಳನ್ನು ಸುರಿಯುವುದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಈ ವೇಳೆ ತಳಗವಾರ ಗ್ರಾಮದ ಪ್ರತಾಪ್ ಎಂಬುವರು ಮಾತನಾಡಿ, ವಿದ್ಯುತ್ ಬ್ಯಾಟರಿಯಿಂದ ಹೊರ ಸೂಸುವ ಮೊನೋಲೀತಿಯಂ ಎಂಬ ವಿಷಕಾರಿ ಅನಿಲವನ್ನು ಕೆರೆಗೆ ಸುರಿದಿದ್ದು ಇದು ಬಿದ್ದ ಕಡೆ ಭೂಮಿಯು ಸಹ ಯೋಗ್ಯವಾಗದಾಗೆ ಆಗುತ್ತೆ, ಅಷ್ಟೆ ಅಲ್ಲದೆ ಇದರ ಮೇಲೆ ನೀರು ಬಿದ್ದಷ್ಟು ಬೆಂಕಿಯಂತೆ ಉರಿಯುವುದು ಜಾಸ್ತಿ. ಇದು ಉರಿದಾಗ ದುರ್ವಾಸನೆ ಸೂಸಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ದೂರಿದರು. ಇನ್ನು ಈ ವಿಷಯ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಗೆ ತಿಳಿಸಿದ್ದು ಮುಂದಿನ ಕ್ರಮ ಅಧಿಕಾರಿಗಳು ಕೈಗೊಂಡು ಕಾನೂನು ರಿತ್ಯ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.