2024ರ ಸೆಪ್ಟೆಂಬರ್ 7 ರಂದು, ಶನಿವಾರದ ಇಂದಿನ ಪಂಚಾಂಗ ಮತ್ತು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಎಂಬುದನ್ನು ತಿಳಿಯಲು ಇಂದಿನ ರಾಶಿಗಳ ಫಲಾಫಲಗಳು ಹೇಗಿದೆ ಎಂದು ನೋಡಿ.
ನಿತ್ಯ ಪಂಚಾಂಗ
ಸಂವತ್ಸರ: ಕ್ರೋಧಿ ನಾಮ ಸಂವತ್ಸರ, ಆಯಣ: ದಕ್ಷಿಣಾಯಣ, ಋತು: ವರ್ಷಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ತಿಥಿ: ಚತುರ್ಥೀ, ವಾಸರ: ಸ್ಥಿರವಾಸರ, ನಕ್ಷತ್ರ: ಚಿತ್ರಾ, ಯೋಗ: ಬ್ರಹ್ಮ, ಕರಣ: ಭದ್ರಾ, ದಿನ ವಿಶೇಷ: ಗಣೇಶ ಚತುರ್ಥೀ, ವಿನಾಯಕೀ ಚತುರ್ಥೀ, ಮೃತ್ತಿಕಾ ಗಣಪತಿ ಪೂಜನ, ಚಂದ್ರದರ್ಶನ ನಿಷೇಧ, ಸ್ಯಮಂತಕೋಪಾಖ್ಯಾನ ಶ್ರವಣ.
ರಾಹುಕಾಲ: 9:00 AM – 10:30 AM
ಗುಳಿಕಕಾಲ: 6:00 AM – 7:30 AM
ಯಮಗಂಡಕಾಲ: 1:30 PM – 3:00 PM
ಮೇಷ ರಾಶಿ: ಇಂದು ಇಡೀ ದಿನವನ್ನು ಆನಂದಿಸುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂಬಂಧಿಕರೊಂದಿಗೆ ಸಂತೋಷವಾಗಿರುತ್ತಾರೆ. ಇಂದು ಆರ್ಥಿಕ ಲಾಭವಿದೆ. ಹಬ್ಬ ಮತ್ತು ಮನರಂಜನೆಗಾಗಿ ಹೆಚ್ಚು ಖರ್ಚು ಮಾಡುವಿರಿ.
ವೃಷಭ ರಾಶಿ: ಇಂದು ನೀವು ಸ್ನೇಹಿತರೊಂದಿಗೆ ಮೋಜು ಮಾಡುವಿರಿ. ಇಂದು ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆಯಿದೆ. ಖರ್ಚು ಮಾಡುವಲ್ಲಿ ಜಾಗರೂಕರಾಗಿರಿ. ಹೆಚ್ಚುವರಿ ಖರ್ಚುಗಳಿಂದ ನೀವು ತೊಂದರೆಗೆ ಸಿಲುಕುವಿರಿ.
ಮಿಥುನ ರಾಶಿ: ನಿಮ್ಮ ಮನೆಯಲ್ಲಿ ಸಂಭ್ರಮಾಚರಣೆ ನಡೆಯಲಿದೆ. ವ್ಯಾಪಾರದ ವಿಷಯದಲ್ಲಿ ಲಾಭ ಪಡೆಯುವಿರಿ. ನಂಬಿಕಸ್ಥ ಸ್ನೇಹಿತರಿಂದ ಮೋಸ ಹೋಗುವ ಅಪಾಯವಿದೆ. ಕುಟುಂಬ ಸದಸ್ಯರು ನಿಮ್ಮನ್ನು ಬೆಂಬಲಿಸುತ್ತಾರೆ.
ಕರ್ಕ ರಾಶಿ: ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುವಿರಿ. ಇಂದು ವ್ಯಾಪಾರದ ವಿಷಯದಲ್ಲಿ ನೀವು ಯಶಸ್ವಿಯಾಗುತ್ತೀರಿ. ಹೂಡಿಕೆಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಒಂದು ಹೆಜ್ಜೆ ಮುಂದಿಡುತ್ತೀರಿ. ಇಂದು ವ್ಯಾಪಾರದ ದೃಷ್ಟಿಯಿಂದ ಲಾಭದಾಯಕವಾಗಿರುತ್ತದೆ.
ಸಿಂಹ ರಾಶಿ: ಇಂದು ಬಂಧುಗಳೊಂದಿಗೆ ವಿಹಾರ ಹೋಗುವ ಸಾಧ್ಯತೆ ಇದೆ. ಇಡೀ ದಿನವನ್ನು ಲವಲವಿಕೆಯಿಂದ ಕಳೆಯುತ್ತೀರಿ. ನಿಮ್ಮ ಸ್ನೇಹಿತರಿಂದ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ.
ಕನ್ಯಾ ರಾಶಿ: ನೀವು ಇಂದು ವ್ಯಾಪಾರದಲ್ಲಿ ಕೆಲವು ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುತ್ತೀರಿ. ಹೂಡಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವಿದೆ. ಇಂದು ಖರ್ಚು ಮಾಡುವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ದೂರ ಪ್ರಯಾಣದಲ್ಲಿ ಜಾಗರೂಕರಾಗಿರಿ.
ತುಲಾ ರಾಶಿ: ಇಂದು ಬಂಧುಗಳೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ವ್ಯಾಪಾರ ವಲಯದಲ್ಲಿರುವವರಿಗೆ ಇಂದು ಬಹಳ ನಿರ್ಣಾಯಕವಾಗಿದೆ. ಉತ್ತಮ ಲಾಭ ಪಡೆಯುವ ಅವಕಾಶವಿದೆ. ನೀವು ಇಡೀ ದಿನವನ್ನು ಉತ್ಸಾಹದಿಂದ ಕಳೆಯುತ್ತೀರಿ.
ವೃಶ್ಚಿಕ ರಾಶಿ: ಇಂದು ಕುಟುಂಬದೊಂದಿಗೆ ದೂರದ ಪ್ರಯಾಣ ಮಾಡುವಿರಿ. ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಪ್ರಯತ್ನವು ಫಲ ನೀಡುತ್ತದೆ. ಹಣದ ವಿಷಯದಲ್ಲಿ ಜಾಗರೂಕರಾಗಿರಿ ಇಲ್ಲದಿದ್ದರೆ ಮೋಸ ಹೋಗುವ ಅಪಾಯವಿದೆ.
ಧನು ರಾಶಿ: ಇಂದು ನಾಲ್ವರು ಹೆಮ್ಮೆ ಪಡುವಂತಹ ಕೆಲಸ ಮಾಡುವಿರಿ. ಹಣದ ವಿಷಯದಲ್ಲಿ ಕುಟುಂಬಸ್ಥರಿಂದ ಸಹಾಯ ಪಡೆಯುತ್ತೀರಿ. ಇಂದು ಸ್ನೇಹಿತರೊಂದಿಗೆ ಮನರಂಜನೆಯಲ್ಲಿ ಭಾಗವಹಿಸುತ್ತೀರಿ. ಖರ್ಚು ಮಾಡುವಲ್ಲಿ ಜಾಗ್ರತೆ ಇರಲಿ.
ಮಕರ ರಾಶಿ: ವ್ಯವಹಾರದ ದೃಷ್ಟಿಯಿಂದ ಇದು ನಿಮಗೆ ಲಾಭದಾಯಕವಾಗಿರುತ್ತದೆ. ಉನ್ನತ ಹುದ್ದೆಗಳನ್ನು ಪಡೆಯುವ ಸಾಧ್ಯತೆ ಇದೆ. ಕಾನೂನು ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ.
ಕುಂಭ ರಾಶಿ: ಇಂದು ಬಂಧುಗಳೊಂದಿಗೆ ಸಂತೋಷದಿಂದ ಕಳೆಯುವಿರಿ. ಆರ್ಥಿಕವಾಗಿ ನೀವು ಬಯಸಿದ ಗುರಿಯನ್ನು ಸಾಧಿಸುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಇಂದು ಸಾಧ್ಯವಾದಷ್ಟು ದೂರ ಪ್ರಯಾಣ ಮಾಡದಿರುವುದು ಉತ್ತಮ.
ಮೀನ ರಾಶಿ: ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವ್ಯಾಪಾರದ ವಿಷಯದಲ್ಲಿ, ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಇಂದು ಆರ್ಥಿಕವಾಗಿ ಲಾಭವಾಗಲಿದೆ. ಉದ್ಯೋಗಿಗಳು ಬಡ್ತಿ ಪಡೆಯಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಿ ಇಲ್ಲದಿದ್ದರೆ ನಷ್ಟದ ಅಪಾಯವಿದೆ.