ಕೋಲಾರ: ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೀಯ ಅಂಗವಾಗಿ ನಗರದ ಟೇಕಲ್ ವೃತ್ತದಲ್ಲಿರುವ ಕೋಲಾರ ವ್ಯಾಯಾಮ ಶಾಲೆ(ಗರಡಿ ಮನೆ)ಯಲ್ಲಿ ಮತ್ತೆ ಹುಟ್ಟಿ ಬಾ ಅಪ್ಪು ಎಂಬ ಘೋಷಣೆ ಮೂಲಕ ಪೂಜಾ ವಿಧಾನ ಸಲ್ಲಿಸಿ, ಅನ್ನದಾಸೋಹ ನಡೆಸಲಾಯಿತು.
ಈ ವೇಳೆ ಗರಡಿ ಶಿವು ಮಾತನಾಡಿ, ಆರೋಗ್ಯವಂತ ದೇಹಕ್ಕೆ ವ್ಯಾಯಾಮವು ಅತಿ ಅಗತ್ಯ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ದೇಹಕ್ಕೆ ಬೇಕಾದ ವ್ಯಾಯಾಮ ಮಾಡಬೇಕು. ಉತ್ತಮ ಆರೋಗ್ಯ ಪಡೆಯುವುದರ ಜೊತೆಗೆ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ. ಅಪ್ಪು ಅವರ ಗುಣ ಹಾಗೂ ಫಿಟ್ನೆಸ್ ನಮಗೆಲ್ಲರಿಗೂ ಮಾದರಿ. ಪುನೀತ್ ರಂತೆ ಸರಳ ಜೀವನ ನಡೆಸುವ ಮೂಲಕ ಸಮಾಜಸೇವೆಯನ್ನು ಮಾಡಬೇಕು. ಇತರರಿಗೆ ನಮ್ಮ ಶಕ್ತಿಯಾನುಸಾರ ದಾನ ಧರ್ಮಮಾಡಿ ಪುಣ್ಯಗಳಿಸಬೇಕು ಎಂದರು.
ಗರಡಿಮನೆ ಪಟುಗಳು ನೇತ್ರಾದಾನ ಮಾಡುವ ಶಪಥಗೈದರು. ಈ ಸಂಧರ್ಭದಲ್ಲಿ ರಮೇಶ್ ಬಜರಂಗದಳ ರಾಜು, ಗೋಪಾಲ್, ವೆಂಕಟೇಶ್ ಬಾಬು, ಧೀರಜ್, ಮಹೇಶ್, ಯಶವಂತ್, ಹೃತ್ವಿಕ್, ಸಾಯಿ ಲಿಖಿತ್, ರೋಹಿತ್, ಗೌತಮ್, ಸಂಜಯ್ ಸಿಂಗ್, ಶರತ್, ಡ್ರ್ಯಾಗನ್ ಮಂಜು, ನಟರಾಜ್, ಗುರುಪ್ರಸಾದ್ ಮತ್ತಿತರರು ಹಾಜರಿದ್ದರು.