2024ರ ಸೆಪ್ಟೆಂಬರ್ 4 ರಂದು, ಬುಧವಾರದ ಇಂದಿನ ಪಂಚಾಂಗ ಮತ್ತು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಎಂಬುದನ್ನು ತಿಳಿಯಲು ಇಂದಿನ ರಾಶಿಗಳ ಫಲಾಫಲಗಳು ಹೇಗಿದೆ ಎಂದು ನೋಡಿ.
ಸಂವತ್ಸರ: ಕ್ರೋಧಿ ನಾಮ ಸಂವತ್ಸರ, ಆಯಣ: ದಕ್ಷಿಣಾಯಣ, ಋತು: ವರ್ಷಾ ಋತು, ಮಾಸ: ಭಾದ್ರಪದ, ಪಕ್ಷ: ಶುಕ್ಲ ಪಕ್ಷ, ತಿಥಿ: ಪ್ರತಿಪತ್, ಶ್ರಾದ್ಧ ತಿಥಿ: ದ್ವಿತೀಯಾ, ವಾಸರ: ಸೌಮ್ಯವಾಸರ, ನಕ್ಷತ್ರ: ಉತ್ತರಾಫಾಲ್ಗುಣೀ, ಯೋಗ: ಸಾಧ್ಯ, ಕರಣ: ಬವ
ರಾಹುಕಾಲ: 12:00 PM – 1:30 PM
ಗುಳಿಕಕಾಲ: 10:30 AM – 12:00 PM
ಯಮಗಂಡಕಾಲ: 7:30 AM – 9:00 AM
ಶುಭಸಮಯ: 10:07 PM – 11:55 PM
ಮೇಷ ರಾಶಿ: ಇಂದು ವ್ಯಾಪಾರಸ್ಥರಿಗೆ ತುಂಬಾ ಉತ್ತೇಜನಕಾರಿಯಾಗಿದೆ. ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯುತ್ತೀರಿ. ಇಂದು ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ದೀರ್ಘಕಾಲ ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.
ವೃಷಭ ರಾಶಿ: ವ್ಯಾಪಾರದಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ಇಂದು ನೀವು ದೊಡ್ಡ ಲಾಭವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ.
ಮಿಥುನ ರಾಶಿ: ವ್ಯಾಪಾರದ ವಿಷಯದಲ್ಲಿ ಇಂದು ಅನುಕೂಲಕರವಾಗಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಇಂದು ನೀವು ಸಂತೋಷವಾಗಿರುತ್ತೀರಿ. ಕುಟುಂಬ ಸದಸ್ಯರು ನಿಮಗೆ ಸಹಾಯ ಮಾಡುತ್ತಾರೆ. ಬೆಲೆಬಾಳುವ ವಸ್ತುಗಳ ಖರೀದಿ ಮಾಡಲು ಉತ್ತಮ ಸಮಯ.
ಕರ್ಕಾಟಕ ರಾಶಿ: ಹೊಸ ವ್ಯವಹಾರದ ವಿಷಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆಸ್ತಿಯನ್ನು ಖರೀದಿಸಲು ಇದು ಶುಭ ಸಮಯ. ರಿಯಲ್ ಎಸ್ಟೇಟ್ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತೇಜನಕಾರಿಯಾಗಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ.
ಸಿಂಹ ರಾಶಿ: ಇಂದು ನೀವು ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವಿಶೇಷವಾಗಿ ಬಡ್ತಿಗೆ ಸಂಬಂಧಿಸಿದಂತೆ ದೀರ್ಘಕಾಲ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಇಂದು ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುವಿರಿ. ಸ್ನೇಹಿತರಿಂದ ಒಳ್ಳೆಯ ಸುದ್ದಿಗಳನ್ನು ಕೇಳುವಿರಿ.
ಕನ್ಯಾ ರಾಶಿ: ವ್ಯಾಪಾರಸ್ಥರು ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ನಂಬಿದವರಿಂದ ಮೋಸ ಹೋಗುವ ಅಪಾಯವಿರುತ್ತದೆ. ಹಣದ ವಿಚಾರದಲ್ಲೂ ಜಾಗ್ರತೆ ವಹಿಸಬೇಕು. ಸಂಸಾರದಲ್ಲಿ ಕೆಲವು ವಾದ-ವಿವಾದಗಳಿಗೆ ಒಳಗಾಗದೇ ಇದ್ದರೆ ಉತ್ತಮ. ದೂರ ಪ್ರಯಾಣ ಮಾಡುವಿರಿ.
ತುಲಾ ರಾಶಿ: ಉದ್ಯಮಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ. ಇಂದು ಧನಯೋಗವೂ ಇದೆ. ಕೆಲವು ಕೌಟುಂಬಿಕ ಕಲಹಗಳಿಂದ ಸಿಟ್ಟಾಗುತ್ತಾರೆ. ಆದರೆ ತಾಳ್ಮೆಯಿಂದ ಇದ್ದರೆ ಈ ಸಮಸ್ಯೆಯಿಂದ ಹೊರಬರಬಹುದು.
ವೃಶ್ಚಿಕ ರಾಶಿ: ಇಂದು ವ್ಯಾಪಾರಸ್ಥರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ, ಆದ್ದರಿಂದ ನೀವು ದಿನವಿಡೀ ಸಂತೋಷವಾಗಿರುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ಧನು ರಾಶಿ: ದೀರ್ಘಕಾಲ ಬಾಕಿ ಇರುವ ಹಣಕಾಸಿನ ವಿವಾದಗಳು ಬಗೆಹರಿಯುತ್ತವೆ. ಇದರಿಂದ ನೀವು ದಿನವಿಡೀ ಸಂತೋಷವಾಗಿರುತ್ತೀರಿ. ಸಂಗಾತಿಯೊಂದಿಗೆ ಇಂದು ದೂರದ ಪ್ರಯಾಣ ಮಾಡುವಿರಿ. ಅವಿವಾಹಿತರು ಇಂದು ಒಳ್ಳೆಯ ಸುದ್ದಿ ಕೇಳುವರು.
ಮಕರ ರಾಶಿ: ಆರ್ಥಿಕವಾಗಿ ನೀವು ಹೊಸ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಇದರಿಂದ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಇಂದು ಅತ್ಯಂತ ಅನುಕೂಲಕರ ದಿನವಾಗಿದೆ. ನಿರುದ್ಯೋಗಿಗಳು ಸಂದರ್ಶನದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಇಂದು ಕೌಟುಂಬಿಕ ಜೀವನದಲ್ಲಿ ಸಂತೋಷದಿಂದ ಕಳೆಯುವಿರಿ.
ಕುಂಭ ರಾಶಿ: ನಿಮ್ಮ ಸಂಗಾತಿಯಿಂದ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. ಇಡೀ ದಿನವನ್ನು ಸಂತೋಷದಿಂದ ಕಳೆಯಿರಿ. ವ್ಯವಹಾರದಲ್ಲಿ ಜಾಗರೂಕರಾಗಿರಿ. ಇಂದು ಹಣದ ನಷ್ಟದ ಸಾಧ್ಯತೆಯಿದೆ. ಸಂತೋಷ ಮತ್ತು ಕಷ್ಟದ ಕ್ಷಣಗಳು ಎರಡೂ ಇರುತ್ತದೆ.
ಮೀನ ರಾಶಿ: ಉದ್ಯಮಿಗಳಿಗೆ ಇಂದು ಹೊಸ ಆರ್ಡರ್ ಸಿಗಲಿದೆ. ಇಂದು ಸಂತೋಷದಿಂದ ಕಳೆಯುವಿರಿ. ನಿರುದ್ಯೋಗಿಗಳು ಒಳ್ಳೆಯ ಸುದ್ದಿ ಕೇಳುವರು. ಕೌಟುಂಬಿಕ ವಿಚಾರಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಮಾತನ್ನು ಹತೋಟಿಯಲ್ಲಿಟ್ಟುಕೊಂಡರೆ ತೊಂದರೆಯಿಂದ ಪಾರಾಗಬಹುದು.